ನಾನು ಮತ್ತು ಬಾಲ್ಕನಿ…..

ಇವತ್ತು ಬಾಲ್ಕನಿ ಒದ್ದೆ ಒದ್ದೆ………
ಬೆಳಗಿನಿಂದಲೂ ಹೀಗೇ, ಮೂಡ್ ಆಫ್ ಮಾಡಿಕೊಂಡಂತಿರುವ ಆಕಾಶ.
ಇನ್ನೇನು ಅತ್ತೇ ಬಿಡುವಂತೆ……

ಮಳೆ ಬರುವ ಮುಂಚೆ ಕಪ್ಪಿಟ್ಟ ಮುಗಿಲು, ಥ೦ಡಿ ಗಾಳಿ, ನಿದ್ದೆಗಣ್ಣಿನ, ತೂಕಡಿಸುವ ವಾತಾವರಣ.
ಆಹಾ…! ಎಷ್ಟು ರೊಮ್ಯಾಂಟಿಕ್ ಕಣೇ…..ಎಂದುಕೊಳ್ಳುವ ಹಂತ ದಾಟಿಬಿಟ್ಟಿದ್ದೇನೆ.
ಮನಸಲ್ಲಿ ಎಂತದೋ ದುಗುಡ ತುಂಬಿಕೊಂಡ ಅಳುಮುಖದ ಹುಡುಗನ ಹಾಗೆ
ಆಕಾಶ ಅಂತೆಲ್ಲ ಅನಿಸಲು ಶುರುವಾಗಿರುವುದು ಈಗೀಗ ಅಷ್ಟೇ……

ಕಂಹೀ ದೂರ್ ಜಬ್ ದಿನ್ ಡಲ್ ಜಾಯೇ
ಸಾಂಜ್ ಕೀ ದುಲ್ಹನ್ ಬದನ್ ಚುರಾಯೇ
ಚುಪ್ ಕೈಸೆ ಆಯೆ ……..
ಅಂತ ಜಗಜಿತ್ ರ ಗಜ಼ಲ್ ಬ್ಯಾಕ್‌ಗ್ರೌಂಡ್ ನಲ್ಲಿ ಹಾಕಿ ಕುಳಿತು ಬಿಟ್ಟರಂತೂ ಬಾಲ್ಕನಿಯಲ್ಲಿ
ನೆನಪುಗಳ ಸಂತೆ……..

ಮನೆ ಕೆಳಗಿನ ಚಂದದ ಟಾರು ರಸ್ತೆಯ ಮೇಲೆ ರಪರಪನೆ ಮಳೆ ಸುರಿವ ಕ್ಷಣಗಳು ನನ್ನ ಫೆವರಿಟ್ !
ನಮ್ಮ ಹಿಂದಿ ಸಿನೆಮಾದ ಹೀರೋಯಿನ್ ಗಳಂತ ಜೋರು ಮಳೆ ಬರುವಾಗ ಖಾಲಿ ರಸ್ತೆಯಲ್ಲಿ
ಒಮ್ಮೆಯದಾದ್ರೂ ತಕತಕ ಕುಣಿದುಬಿಡಬೇಕು ಅಂತ ಮಳೆ ಬಂದಾಗೆಲ್ಲ ಯೋಚಿಸುತ್ತೇನೆ!
ಆದ್ರೆ ಅವೆಲ್ಲ್ಲ ಆಗೋ ಹೋಗೋ ಮಾತೇ? “ಇಷ್ಟು ಸಣ್ಣ ವಯಸ್ಸಿಗೇ ಹೇಗಾಗಿಹೋಗಿದೆ ನೋಡಿ ಪಾಪ “ಅಂದುಕೊಳ್ಳುತ್ತ ನಡೆದುಬಿಟ್ಟಾರು ನಮ್ಮ ಜನ ಆಮೇಲೆ!!

ನಂದು ಬಿಡಿ, ಪ್ರತಿದಿನ ಬಾಲ್ಕನಿಯಲ್ಲಿ ಕೂತು ಕೈಲೊಂದು ಕಪ್ ಕೆನೆಕಾಫಿಯೊಂದಿಗೆ

ಅಪರಾತಪರ ಕನಸು ಕಾಣೋದು ಚಟವಾಗಿಬಿಟ್ಟಿದೆ

ಕನಸು ಕಾಣೋದಿಕ್ಕೇನು ಹೇಳಿ, ಕಾಸೇ, ಖರ್ಚೇ??!

ಜಗಜಿತ್ ಸಿಂಗ್ ಹಾಡು ಮುಗಿಸಿ ಸುಮ್ಮನಾಗಿದ್ದಾನೆ.

ಕಾಫಿಯಲ್ಲಿನ ಕೆನೆ ನಿಧಾನಕ್ಕೆ ಕರಗುತ್ತಿದೆ…….

ಬಾಲ್ಕನಿಯ ಮತ್ತೊಂದು ಕನಸಿಗೆ ರೆಡಿಯಾಗುತ್ತಿದೆ………………..

Advertisements

2 thoughts on “ನಾನು ಮತ್ತು ಬಾಲ್ಕನಿ…..

  1. Pramod ಹೇಳುತ್ತಾರೆ:

    Post ಓದಿ ಖುಶಿಯಾಯಿತು.
    ಬಾಲ್ಕನಿಯಲ್ಲಿ ಹುದುಗಿದ ಕನಸುಗಳೆಲ್ಲಾ ಬರಹಗಳಾಗಿ ಬರಲಿ.

  2. ಕೆನೆ Coffee ಹೇಳುತ್ತಾರೆ:

    ಥ್ಯಾಂಕ್ಸ್ ಪ್ರಮೋದ್,
    ಬಾಲ್ಕನಿ ನಲ್ಲಿ ಇಣುಕಿ ನೋಡಿದ್ದಕ್ಕೆ. ಬರ್ತಾ ಇರಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s