ಬೀಗ ತೆರೆದಾಗ……..

ಕತ್ತಲೆ ಕೋಣೆಯ ನಡುವಿನ ಕಪ್ಪು ಕಿಟಕಿ ತೆರೆದೆ
ಶತಮಾನಗಳ ಹಳೆಯ ಕಪಾಟು ಕಿರುಗುಟ್ಟಿತು
ಅದರೆದೆಯ ಮಾಸಲು ಗಾಜಿನಲ್ಲಿ ನನ್ನ ಪ್ರತಿಬಿಂಬ ಎಷ್ಟನೆಯದೋ

ಮುರಿದ ಕಾಲಿನ ಖುರ್ಚಿ ಹತ್ತಿ ಮೇಲೆ ಇಣುಕಿದರೆ
ಎಂದೋ ಇಟ್ಟು ಮರೆತ ಪೆನ್ನು
ಹರಿದ ಪಾಟೀಚೀಲ, ಬಳೆಚೂರು…..
ಸತ್ತ ಹಾತೆಯ ರೆಕ್ಕೆಗೂ ವರ್ಷಗಳ ಇತಿಹಾಸ !

ಕೋಣೆಯ ಕಮಟು ವಾಸನೆ, ಅಪರೂಪಕ್ಕೆ ಬಿದ್ದ ಇಳಿಬಿಸಿಲು
ಏಕಾಂತ ಸುಖ
ನಮದಿಬ್ಬರದು ಈಗ ದೂರದ ನೆಂಟಸ್ತನ

ಕಪಾಟಿನೊಳಗಿನದು ಹೊಸದೇ ಪ್ರಪಂಚ
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,
ಕದ್ದು ನೋಡುವ ನಗ್ನ ಚಿತ್ರ
ಎಲ್ಲ ಬಯಲಾಗಿಬಿಡಬಹುದೇನೋ ….

ಸ್ವಾತಂತ್ರ್ಯದ ಕಥೆ, ವಚನ ಭಾರತ ಅಜ್ಜನದ್ದಿರಬಹುದು
ಕಸ್ತೂರಿಯ ಹರಿದ ಪುಟಗಳು, ಹಳೆಯ ತರಂಗ ಅಣ್ಣನದ್ದೇ ಸಂಗ್ರಹ
ಅಮ್ಮ ಇಟ್ಟು ಮರೆತ ಹಾಡಿನ ಪಟ್ಟಿಯಲ್ಲವೇ ಇದು?
ಕಾಲು ಮುರಿದ ಚಂದದ ಗೊಂಬೆ ನಂಗೆ ಅಪ್ಪ ತಂದುಕೊಟ್ಟಿದ್ದು

ಕೋಣೆಯಲ್ಲಿನ ಪ್ರೀತಿಗೆ ಕಪಾಟು ನಾಚಿದ್ದಿರಬಹುದು
ಜಗಳಗಳೂ ಹೊಸತೇನಲ್ಲ
ಹೆಂಗಸರಿಗೆ೦ತದ್ದೋ ಸಂಶಯ
ಕಪಾಟು ಗುಟ್ಟು ಬಿಟ್ಟುಕೊಟ್ಟ ನೆನಪಿಲ್ಲ

ಕಪಾಟೊಳಗಿನ ಕನ್ನಡಿಯಲ್ಲಿ ಮುಖ ಕಾಣುವುದಿಲ್ಲ
ಎಲ್ಲೆಡೆ ಎರಡಿಂಚು ನೆನಪಿನ ಧೂಳು ……
ವಿನ್ಯಾಸದ ಬಾಗಿಲಿಗೆ ಅಲ್ಲಲ್ಲಿ ಗಾಯದ ಗುರುತು
ನುಸಿ ಗುಳಿಗೆಗಳು ಲಡ್ಡಾಗಿವೆ, ಗೆದ್ದಲಿಗೀಗ ನೆಮ್ಮದಿ

ಬಾಗಿಲು ಮುಚ್ಚಿ ಮೇಲೊಂದು ಚಿಕ್ಕ ಬೀಗ ಅಷ್ಟೆ
ಕಪಾಟು ಮಾತನಾಡುವುದಿಲ್ಲ
ಕರುಬುತ್ತೇನೆ ನಾನು ಕಪಾಟಿನ ಗಟ್ಟಿತನಕ್ಕೆ
ಮೌನ ನನ್ನಿಂದಾಗದ ಮಾತು

ನನ್ನ ಮನದ ಕಪಾಟಿಗೆ ಬೀಗವಿಲ್ಲ
ನನ್ನೆಲ್ಲ ಭಾವಗಳನ್ನೂ ಇಟ್ಟುಕೊಳ್ಳಬಹುದಿತ್ತು ಕಪಾಟು
ನಾನು ಸುಖಿಯಾಗುತ್ತಿದ್ದೆ ……

Advertisements

10 thoughts on “ಬೀಗ ತೆರೆದಾಗ……..

 1. vijayraj ಹೇಳುತ್ತಾರೆ:

  thumbaa chennagide….
  ellavanno kapaaTinoLagiTTu beega haakuvanthe
  adu bEkendaaga tegedu beraginda allella hudukaaduvanthe
  manasina maatugaLigoo beega haakOdaagidre chennittu alwa?
  bekendaaga tegedu keliskobahudiitu

 2. Maruthi ಹೇಳುತ್ತಾರೆ:

  Nice memories……… nanagu nanna childhood nenapayitu…………
  thanks…….

 3. ಕೆನೆ Coffee ಹೇಳುತ್ತಾರೆ:

  ಥ್ಯಾಂಕ್ಸ್ ವಿಜಯರಾಜ್ ಅವರೇ,
  ಅದು ನಿಜ. ಆದರೆ ಹಾಗಾಗುವ೦ತಿದ್ರೆ ಮನಸ ಕಪಾಟು ತುಂಬಾ ಹಳೆಯ ಸರಕೇ ತುಂಬಿ ಹೋಗುತ್ತಿತ್ತೇನೋ ಅಂತಾನೂ ಅನಿಸಿದ್ದಿದೆ. ಅದೂ ಇನ್ನೂ ಕಷ್ಟವೇನೋ..

 4. ಕೆನೆ Coffee ಹೇಳುತ್ತಾರೆ:

  ಥ್ಯಾಂಕ್ಸ್ ಮಾರುತಿಯವ್ರೆ,
  ಅಷ್ಟಾದ್ರೆ ಬರೆದಿದ್ದು ಸಾರ್ಥಕ ಆಯ್ತು ಬಿಡಿ 🙂

 5. chetana chaitanya ಹೇಳುತ್ತಾರೆ:

  blog, ಬರಹಗಳು ಚೆನ್ನಾಗಿವೆ. ಕೆನೆಯಿಲ್ಲದ (ನಂಗೆ ಕೆನೆ ಸೇರಲ್ಲ) ಸ್ಟ್ರಾಂಗ್ ಕಾಫಿ ಕೊಡುವಂತೆ ಹಿತವಾದ ಫೀಲಿಂಗು…

 6. neelihoovu ಹೇಳುತ್ತಾರೆ:

  ಮನಸ್ಸಿನ ಕಪಾಟಿನೊಳಗಿಂದ
  ನೆನಪುಗಳನ್ನು ಒಂದೊಂದಾಗಿ ತೆಗೆದಂತೆನಿಸಿತು…

  ತುಂಬಾ ಚೆನ್ನಾಗಿದೆ.

 7. ಕೆನೆ Coffee ಹೇಳುತ್ತಾರೆ:

  ಅರೇ! 🙂 ತುಂಬಾ ಥ್ಯಾಂಕ್ಸ್ ಚೇತನಾ ಮೇಡಂ,
  ನೀವು ನನ್ನ ಬಾಲ್ಕನಿ ಗೆ ಬಂದಿದ್ದು ಖುಷಿಯಾಯ್ತು. ನಿಮಗೆ ಸ್ಟ್ರಾಂಗ್ ಕಾಫಿನೇ ಕೊಡೋನವಂತೆ. ಕೆನೆ ಬೇಡ ಬಿಡಿ. 🙂 ಬರ್ತಾ ಇರಿ.

 8. ಕೆನೆ Coffee ಹೇಳುತ್ತಾರೆ:

  @ Neelihoovu

  ಧನ್ಯವಾದಗಳು. ಅಷ್ಟಾದರೆ ನನ್ನ ಕವಿತೆಗೆ ಸಾರ್ಥಕತೆ.

 9. sundaranadu ಹೇಳುತ್ತಾರೆ:

  Dhanyavadagalu,

  Marete hogidda kapatu nenapige bantu. ondu vastu ishtella soochisutte antha nanage marete hogittu. nenapu madikotta nimma kavanakke dhanyavadagalu.

 10. neelanjala ಹೇಳುತ್ತಾರೆ:

  ಕತ್ತಲೆ ಕೋಣೆಯ ನಡುವಿನ ಕಪ್ಪು ಕಿಟಕಿ ತೆರೆದೆ
  ಶತಮಾನಗಳ ಹಳೆಯ ಕಪಾಟು ಕಿರುಗುಟ್ಟಿತು
  ಅದರೆದೆಯ ಮಾಸಲು ಗಾಜಿನಲ್ಲಿ ನನ್ನ ಪ್ರತಿಬಿಂಬ ಎಷ್ಟನೆಯದೋ
  iSHTavaayitu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s