ಒಂದಷ್ಟು ಪ್ರೀತಿಯ ಬಿಂಬಗಳು……

ಆತ – ಯಾವುದೋ ಬೇಸರ. ದಾರಿಯಂಚಿನ ಗೋಡೆಗೊರಗಿ ನಿಲ್ಲುತ್ತಾನೆ.
ಆಕೆ – ಮುಸ್ಸಂಜೆಯ ಇಳಿ ಬಿಸಿಲಲ್ಲಿ ತಣ್ಣಗೆ ನಡೆದು ಬರುತ್ತಾಳೆ.

ಆತ – ನಿಂತಲ್ಲೇ ಬರುವ ಹುಡುಗಿಯರ ನೋಡುತ್ತಾ ನಗುತ್ತಾನೆ.
ಆಕೆ – ಅವನನ್ನೊಮ್ಮೆ ನೋಡಿ ನಿಲ್ಲುತ್ತಾಳೆ. ಸ್ವಲ್ಪ ಹೊತ್ತು ಹಾಗೆಯೇ ಗಮನಿಸುತ್ತಾಳೆ.

ಆತ – ಆಕೆಯನ್ನು ನೋಡಿಯೂ ಸುಮ್ಮನಾಗುತ್ತಾನೆ
ಆಕೆ – ಹತ್ತಿರ ಬಂದು ಬೇಸರದ ಕಾರಣ ಕೇಳುತ್ತಾಳೆ. ಮುದ್ದಿಸುತ್ತಾಳೆ. ಮೈದಡುವುತ್ತಾಳೆ. ಬೇಸರಕ್ಕೆ ಇನ್ನು ಕೆಲಸವಿಲ್ಲ.
ಇದಕ್ಕೂ ಮುಂಚೆ ಅವರಿಬ್ಬರೂ ಅಪರಿಚಿತರು. ಸ್ವಲ್ಪ ಹೊತ್ತು. ಮೋಹ ಪರದೆ ಬೀಸಿತು.

ಬದುಕಿನ ಸಂಜೆ. ಮಾತು ಪ್ರಿಯವಾಗುತ್ತದೆ. ಒಂದು ಗ್ಲಾಸ್ ಬಿಯರ್, ಇಬ್ಬರು ಗೆಳೆಯರು. ಸಾಕಷ್ಟು ಹರಟೆ.
ಸಮಯ ಸುಮ್ಮನೆ ಮುನ್ನಡೆಯುತ್ತದೆ. ಕತ್ತಲಾದಾಗ ಬರುವ ಮಗಳು ಅಪ್ಪನ ಹಣೆಗೆ ಮುತ್ತಿಕ್ಕುತ್ತಾಳೆ.
ಇಬ್ಬರೂ ಮನೆಯತ್ತ ಹೆಜ್ಜೆ ಹಾಕುತ್ತಾರೆ.  ಖುಷಿ ಹಿಂಬಾಲಿಸುತ್ತದೆ.

ಅಮ್ಮ, ಇಬ್ಬರು ಮುದ್ದು ಮಕ್ಕಳು. ಪುಟ್ಟ ತಮ್ಮ ಅತ್ತರೆ ಅಮ್ಮನಿಗಿಂತ ಮೊದಲು ಈ ಅಕ್ಕ ಹತ್ತಿರ ಕುಳಿತು dont cry baby ಅನ್ನುತ್ತಾಳೆ. ತಮ್ಮ ನಕ್ಕರೆ ಅಕ್ಕನಿಗೆ ಸಂಭ್ರಮ! ಮಗಳಲ್ಲೊಬ್ಬ ಪುಟ್ಟ ಅಮ್ಮ ಕಂಡಿದ್ದಾಳೆ……

ಅದೊಂದು ನೀಲಿ ಬಣ್ಣದ ಕಾರು. ಚಾಲಕ ದೊಡ್ಡ ಹುದ್ದೆಯವ. ಹಿಂದಿಂದ ಬಂದ ಮತ್ತೊಂದು ಕಾರು ಮೆಲ್ಲನೆ ನೀಲಿ ಕಾರಿಗೆ ಗುದ್ದಿದೆ. ಇಬ್ಬರೂ ಕೆಳಗಿಳಿದರು. ಹಾನಿಯಾಗಿದ್ದು ದುಬಾರಿ ಕಾರಿಗಲ್ಲವೇ? ಕಾರು ಸದ್ದಿಲ್ಲದೆ ದಾರಿಯಂಚಿಗೆ ನಿಂತಿತು. ಕೆಳಗಿಳಿದವರು ಛೇ ಎಂದರು.
ಅವನ ಕಾರು ಇ೦ವ, ಇ೦ವನ ಕಾರು ಅ೦ವ ನೋಡಿಕೊಂಡರು. ಹತ್ತಿರ ಬಂದವರದ್ದು ಹಸ್ತಲಾಘವ. ಇಬ್ಬರೂ ಸೇರಿ ಫೋನ್ ಮಾಡಿದರು. ನಿಮಿಷಗಳಲ್ಲಿ ಪೋಲಿಸ್ ಬಂದ. ಅವನ ಕೆಲಸ ಅವನದು. ಇವರಿಬ್ಬರೂ ಕಾರನ್ನು ಅಲ್ಲೇ ಬಿಟ್ಟು ಮಾತನಾಡುತ್ತ ಹೊರಟರು…..

ಇವೆಲ್ಲ ನನ್ನ ಬಾಲ್ಕನಿ ಯಿಂದ ಕಂಡ ಬಿಂಬಗಳು..

ಈ ದೇಶದಲ್ಲಿ ಪ್ರೀತಿ, ಕಾಮಗಳೆರಡೂ ಸ್ವಚ್ಛಂದ. ಎಲ್ಲಿಂದೆಲ್ಲಿಗೆ ಹೋದರೂ ಕಾಮ ಕಾಮವೇ, ಪ್ರೀತಿ ಪ್ರೀತಿಯೇ…ಅದೇ ಅಮ್ಮ, ಅದೇ ಸಹನೆ, ಅದೇ ಒಂಟಿತನ….ಅದೇ ಪ್ರೇಮ. ಸ್ನೇಹ.
ಚಹರೆ ಬದಲಿದ್ದೀತು, ಮಣ್ಣು ಬದಲಿದ್ದೀತು, ಬಣ್ಣ ಬದಲಿದ್ದೀತು ಅಷ್ಟೆ.
ಜಾತಿ, ಮತ, ಮತಾಂತರ ಅಂತೆಲ್ಲ ನಮ್ಮೂರ ಸುದ್ದಿ ಬಂದಾಗ, ಸುದ್ದಿಜೀವಿ, ಬುದ್ದಿಜೀವಿಗಳೆಲ್ಲರನ್ನು ಓದುತ್ತಿರೋವಾಗ ಯಾಕೋ ಇದೆಲ್ಲ ಬಿಂಬಗಳು ಪದೇ ಪದೇ ನೆನಪಾದವು…..

Advertisements

6 thoughts on “ಒಂದಷ್ಟು ಪ್ರೀತಿಯ ಬಿಂಬಗಳು……

 1. ಖುಷಿ ಹೇಳುತ್ತಾರೆ:

  “ಅವನ ಕಾರು ಇ೦ವ, ಇ೦ವನ ಕಾರು ಅ೦ವ ನೋಡಿಕೊಂಡರು. ಹತ್ತಿರ ಬಂದವರದ್ದು ಹಸ್ತಲಾಘವ” !!!!

  ಯಾವ ದೇಶದಲ್ಲಿ ಹೀಗೆ??
  ಭಾರತವಂತೂ ಖಂಡಿತ ಇರಲಿಕ್ಕಿಲ್ಲ 🙂

 2. ವೈಶಾಲಿ ಹೇಳುತ್ತಾರೆ:

  kandita. nimma oohe sari. 🙂

 3. bootha ಹೇಳುತ್ತಾರೆ:

  oh..nimma maatugalalli coffee ya becchane hitavide.

 4. ಸೀತಾಳಭಾವಿ ಹೇಳುತ್ತಾರೆ:

  ಮೊದಲ ಬಿಂಬ ಓದಿದಾಗ ನಾನೂ ಆ ದೇಶದಲ್ಲಿ ಇರಬಾರದಿತ್ತೆ ಎನ್ನಿಸಿತು. ಕೊನೆಯ ಬಿಂಬ ಓದಿದಾಗ ನಾನು ಆ ದೇಶದಲ್ಲಿ ಇರುವುದಕ್ಕೆ ಲಾಯಕ್ಕಲ್ಲ ಎಂಬುದು ಸ್ಪಷ್ಟವಾಯಿತು.

 5. Pramod ಹೇಳುತ್ತಾರೆ:

  ಬಾಲ್ಕನಿ ಆಕಾಶದ೦ತೆ ಅನ೦ತವಾಗಿದೆ, ಗೋಡೆಗಳೇ ಇಲ್ಲ. 🙂

 6. ವೈಶಾಲಿ ಹೇಳುತ್ತಾರೆ:

  @ bootha
  ಅಯ್ಯೋ… ಭೂತ, ಪ್ರೇತಗಳೆಲ್ಲ ನನ್ನ ಬ್ಲಾಗ್ ಗೆ ಭೇಟಿ ನೀಡೋಕೆ ಶುರುಮಾಡಿಬಿಟ್ಟಿವೆ !!!!!!!!! ಹೆದರಿಕೆ ಆಗ್ತಿದೆಯಪ್ಪಾ…. 😦
  ಏನೇ ಇರ್ಲಿ, ಬಂದಿದ್ಕೆ ಥಾ೦ಕ್ಸು… 🙂

  @ ಸೀತಾಳಭಾವ
  🙂

  @ pramod
  ಇದು ಓಪನ್ ಬಾಲ್ಕನಿ. ಗೋಡೆಗಳಿದ್ದುಬಿಟ್ರೆ ಕನಸು ಕಾಣೋದು ಕಷ್ಟ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s