ಮತ್ತಷ್ಟು ಹಾಯ್ಕುಗಳು….

ನಿನ್ನ ನೆನಪಿನಿಂದಾಚೆ ಹೋಗಬೇಕೆಂದಿದ್ದೆ
ಮನಸಿನ ಬೀಗ ನಿನ್ನ ಹೆಸರಿಲ್ಲದೆ ತೆಗೆಯಲೇ ಇಲ್ಲ!

ನನ್ನ ರಾತ್ರಿಗಳಲ್ಲಿ ಬೆಳದಿಂಗಳಿತ್ತು
ಲೆಕ್ಕ ತಪ್ಪಿಸಲು ತಾರೆಗಳಿದ್ದವು
ಸೇರಿದ್ದು ನಿನ್ನ ಹೆಜ್ಜೆ ಗುರುತೊಂದೇ
ಚಂದ್ರನೀಗ ಮುನಿಸಿಕೊಂಡಿದ್ದಾನೆ !

ನಿನ್ನ ಕನಸುಗಳಿಗೆ ಕಾವಲುಗಾರನನ್ನೇಕಿಡಲಿಲ್ಲ?
ನನ್ನ ಮೇಲೀಗ ನಿದ್ದೆ ಕದ್ದ ಅಪವಾದವಿದೆ…

ಪುಟದ ಸಾಲುಗಳಾಗಿದ್ದರೆ ಅಳಿಸಿಬಿಡುತ್ತಿದ್ದೆ
ನೀನು ಕೈ ಹಿಡಿದು ತಿದ್ದಿದ ಮೊದಲಕ್ಷರ…..

ನಿನ್ನ ಹೆಜ್ಜೆಗಳ ಸದ್ದು ಕೇಳುತ್ತಿಲ್ಲ
ಮನೆಯ ಹೆಬ್ಬಾಗಿಲಿನದ್ದು ಮುಚ್ಚಿಕೊಳ್ಳಲು ತಕರಾರು!

Advertisements

8 thoughts on “ಮತ್ತಷ್ಟು ಹಾಯ್ಕುಗಳು….

 1. neelihoovu ಹೇಳುತ್ತಾರೆ:

  ಎರಡನೆಯದು ತಲೆಗೆ ಹತ್ತಲಿಲ್ಲ.
  ಬಾಕಿಯೆಲ್ಲಾ ಎಂದಿನಂತೆ ಸೂಪರ್ !

 2. ಖುಷಿ ಹೇಳುತ್ತಾರೆ:

  “ನಿನ್ನ ಕನಸುಗಳಿಗೆ ಕಾವಲುಗಾರನನ್ನೇಕಿಡಲಿಲ್ಲ?
  ನನ್ನ ಮೇಲೀಗ ನಿದ್ದೆ ಕದ್ದ ಅಪವಾದವಿದೆ…”

  ಬಹಳ ಚೆನ್ನಾಗಿದೆ! ಹೀಗೆ ಬರಿತಾ ಇರಿ..

 3. ವೈಶಾಲಿ ಹೇಳುತ್ತಾರೆ:

  @ ಖುಷಿ,
  ತುಂಬಾನೇ thaanksu…….

  @ ನೀಲಿಹೂವು,
  ಅದರ ಅರ್ಥ ಆತ ಬರೋ ಮೊದಲು ಬೆಳದಿಂಗಳ ರಾತ್ರಿ, ನಕ್ಷತ್ರಗಳು, ಕನಸು ಅಂತೆಲ್ಲ ಇದ್ದವು. ಅದನ್ನೆಲ್ಲಾ ಕೊಡ್ತಾ ಇದ್ದಿದ್ದು ಚಂದ್ರ. ಈಗ ಆತ ಬಂದ ಮೇಲೆ ಅವನೇ ಎಲ್ಲ ಆಗಿಬಿಟ್ಟಿದ್ದಾನೆ, ನಾನು ಅವನೊಡನೆ ಮೈ ಮರೆತಿರುವುದರಿಂದ ಚಂದ್ರನಿಗೆ ಸಿಟ್ಟು ಬಂದಿದೆ ಅಂತ ಒಂದು ಕಲ್ಪನೆ……
  ನಾನು ಅರ್ಥ ಆಗದಿರೋ ಹಂಗೆಲ್ಲ ಬರೆಯೋಕೆ ಶುರು ಮಾಡಿಬಿಟ್ನಾ?!! ಹಿಹಿಹಿಹಿಹಿಹಿ
  ಆದ್ರೆ ನಂಗೆ ಇಷ್ಟೆಲ್ಲಾ ಹೊಗಳಿಕೆ ಬೇಕಾ ಅಂತ????

 4. ಖುಷಿ ಹೇಳುತ್ತಾರೆ:

  ಎರಡನೆಯದು ನಿಜಕ್ಕೂ ನನಗೂ ಅರ್ಥವಾಗಿರಲಿಲ್ಲ !! 🙂
  ಈಗ ಮಿದುಳಿಗೆ ಹೋಯಿತು ಬಿಡಿ !

  ಕಲ್ಪನೆ Super !

 5. ವೈಶಾಲಿ ಹೇಳುತ್ತಾರೆ:

  ಹ್ಹಾ ಹ್ಹಾ ಹಹ್ಹ ಹ ಹ್ಹಾ ಹ್ಹಹ ಹ್ಹಾ ……… 😀

 6. vijayraj ಹೇಳುತ್ತಾರೆ:

  nice…
  yes uddudda barahakkintha ee tarahada haaykugaLu nimage hecchu chennagi olidirO haagide

 7. ನವಿಲಗರಿ ಹೇಳುತ್ತಾರೆ:

  ಪುಟದ ಸಾಲುಗಳಾಗಿದ್ದರೆ ಅಳಿಸಿಬಿಡುತ್ತಿದ್ದೆ
  ನೀನು ಕೈ ಹಿಡಿದು ತಿದ್ದಿದ ಮೊದಲಕ್ಷರ…..

  ಅಳಿಸೋಕೆ ಅಗಲ್ಲ ಅಲ್ವ?..ಒಂದಕ್ಕ್ಕಿಂತ ಒಂದು ಸೂಪರ್..ಅದ್ರಲ್ಲು ಈ ೨ ಸಾಲು ಅದ್ಭುತ..:) ಸುಮ್ಮನೆ ಪೇಜುಗಟ್ಟಲೆ ಬರೆಸಿಕೊಂಡು ಬೋರು ಹುಟ್ಟಿಸುವ ಕವಿತೆಗಳಿಗಿಂತ ಸವಿರ ಪಟ್ಟು ಹೆಚ್ಚು ಪ್ರೀತಿಯಿದೆ ಈ ನಿಮ್ಮ ಸಾಲುಗಳಲ್ಲಿ..:)

  ಸೋಮು

 8. ವೈಶಾಲಿ ಹೇಳುತ್ತಾರೆ:

  ಸ್ವಾಗತ ಸೋಮು.
  ನೀವು ಬಂದಿದ್ದು ತುಂಬ ಖುಷಿಯಾಯ್ತು. ನನ್ನ ಬರಹಗಳನ್ನ ಮೆಚ್ಚಿಕೊಂಡಿದ್ದಕ್ಕೆ ಅದಕ್ಕಿಂತಾ ಜಾಸ್ತಿ ಖುಷಿ ಆಯ್ತು…ನಾನು ಇಷ್ಟ ಪಟ್ಟು ಓದೋ ಕೆಲವೇ ಬ್ಲಾಗಿಗಳಲ್ಲಿ ನೀವೂ ಒಬ್ಬರು. ಆಗಾಗ ಬರ್ತಾ ಇರಿ. ನನ್ನ ಬರೆಯೋ ಉತ್ಸಾಹಾನೂ ಹೆಚ್ಚುತ್ತೆ 🙂
  ಪ್ರೀತಿಯಿರಲಿ….

  ಹಾಗಂತೀರಾ ವಿಜಯರಾಜ್??

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s