ನಾನು – ಅವನು

ಹೊತ್ತು ಮುಳುಗುವ ಹೊತ್ತಲ್ಲಿ ಅಲೆಗಳಿಗೆದುರಾಗಿ ಕುಳಿತು ಪಾದ ತೋಯಿಸಿಕೊಳ್ಳಬೇಕೆನ್ನುತ್ತೇನೆ, ಆತ ಮೌನದ ಅಲೆಯಲ್ಲಿ ನನ್ನ ಪೂರ್ತಿಯಾಗಿ ತೋಯಿಸಿಬಿಡುತ್ತಾನೆ…

ಚಿಕ್ಕದೊಂದು ದೀಪ ಹಚ್ಚಿಟ್ಟು ಇಂದು candle light dinner ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಆತ ಹೊಸದಾಗಿ ತಂಡ ಹೈ ವೋಲ್ಟೇಜ್ ಬಲ್ಬ್ ಮೇಜಿನ ಮೇಲಿಡುತ್ತಿರುತ್ತಾನೆ…

ನಾನು ಇದ್ದಷ್ಟೂ ಅಂಗಡಿಗಳ ಹುಡುಕಿ ಚಂದದ ಸೀರೆ ಆರಿಕೊಂಡು ಬರುತ್ತೇನೆ, ಆತ ನನಗೆಂದು ಜೀನ್ಸ್, T-shirt ಕೊಟ್ಟು surprise ಮಾಡಿಬಿಡುತ್ತಾನೆ…

ಮೌನದಲ್ಲಿ ಮಾತು ತುಂಬಿಸಿಬಿಡಲು ನಾನು ಕಾಯುತ್ತೇನೆ… ಆತ ಮಾತಿನೊಳಗೂ ಮೌನ ಹೆಕ್ಕುತ್ತಾನೆ….

ಕಣ್ಣಂಚಿನಿಂದ  ಹನಿಯೊಂದು ಬೀಳದಂತೆ ತಡೆಹಿಡಿಯುತ್ತಿರುತ್ತೇನೆ… ಆತ ನೆಗಡಿಯಾದರೆ ಔಷಧಿ ತಗೋಬಾರದಾ ಎನ್ನುತ್ತಾ ಕಾಳಜಿ ತೋರುತ್ತಾನೆ…

( ಘಟನೆಗಳು ಮುಂದುವರಿಯುತ್ತವೆ………….. )

Advertisements

5 thoughts on “ನಾನು – ಅವನು

 1. ಖುಷಿ ಹೇಳುತ್ತಾರೆ:

  “ಚಿಕ್ಕದೊಂದು ದೀಪ ಹಚ್ಚಿಟ್ಟು ಇಂದು candle light dinner ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಆತ ಹೊಸದಾಗಿ ತಂಡ ಹೈ ವೋಲ್ಟೇಜ್ ಬಲ್ಬ್ ಮೇಜಿನ ಮೇಲಿಡುತ್ತಿರುತ್ತಾನೆ…”

  ಪರವಾಗಿಲ್ವೇ…. ನಿಮ್ಮನ್ನ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ 🙂

 2. ವೈಶಾಲಿ ಹೇಳುತ್ತಾರೆ:

  ಥ್ಯಾಂಕ್ಸ್ ಶ್ರೀದೇವಿಯವರೇ, ಬಾಲ್ಕನಿ ಗೆ ಸ್ವಾಗತ.
  ಹೌದು ಅಲ್ವಾ? ಕನಸು, ನೆನಪುಗಳಲ್ಲಿ ನಾವು ಎಷ್ಟೇ ಮುಳುಗಿಹೋಗೋಣ ಅಂದ್ರೂ ವಾಸ್ತವ ಆಗಾಗ ಅರಿವು ಮೂಡಿಸ್ತಾನೇ ಇರುತ್ತೆ ನೋಡಿ….
  ಖುಷಿಯಾಯ್ತು ಬಂದಿದ್ದು, ಪ್ರೀತಿಯಿರಲಿ.

 3. ಪ್ರದೀಪ್ ಹೇಳುತ್ತಾರೆ:

  “men are from mars, women are from venus” ಅಲ್ವಾ..

 4. ಶಿವು.ಕೆ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ. ನೀವು ಅಂದುಕೊಂಡಿದ್ದು ಆಗದೆ ಬೇರೆ ಅದಾಗಲೆ ತಾನೆ ಮಜಾ ಹೆಚ್ಚು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s