ನಾನು ಕಾಯುತ್ತಿದ್ದೇನೆ….

ಹೊತ್ತು ಮುಳುಗುವ ಮುನ್ನ
ಕನಸೊಂದು ಉದಯಿಸೀತು
ನಾನು ಕಾಯುತ್ತಿದ್ದೇನೆ………

ಬಿಗಿದ ಮುಷ್ಠಿ ಅದರ ಬಿಸಿಗೇ
ಬೆವರುವ ಮೊದಲು ಬೆರಳೊ೦ದು ಜೊತೆಯಾದೀತು
ನಾನು ಕಾಯುತ್ತಿದ್ದೇನೆ…

ಮೌನದ ಮೋಡ ಕರಗಿ
ಮಾತುಗಳ ಮಳೆ ಬೀಳಬಹುದು
ನಾನು ಕಾಯುತ್ತಿದ್ದೇನೆ…..

ತುಂಬಿದ ಕಣ್ಣುಗಳ ಅಂಚಿಂದ
ಜಾರಲಿರುವ ಹನಿಗಳ ಅಲ್ಲೇ ಆರಿಸಬೇಕಿದೆ
ನಾನು ಕಾಯುತ್ತಿದ್ದೇನೆ….

ಕಾಯುತ್ತಿದ್ದೇನೆ ಎದೆಯಲ್ಲಿ ಬಣ್ಣದ ಚಿತ್ತಾರ ಮೂಡಿಸಿಕೊಳ್ಳಲೆಂದು
ನೀ ಹೋದ ರಭಸಕ್ಕೆ ಬಿದ್ದ ಕನಸಿನ ರೆಕ್ಕೆಯ
ಮತ್ತೆ ಜೋಡಿಸಿಕೊಳ್ಳಲೆಂದು

ರೆಪ್ಪೆಗಳಿಗೆ ಹೇಳಿದ್ದೇನೆ ಅಂವ ಬರುವವರೆಗೆ ಮುಚ್ಚದಿರಿ
ತುಟಿಗಳಿನ್ನೂ ಬಣ್ಣ ಕಳೆದುಕೊಂಡಿಲ್ಲ
ಕಣ್ಣುಗಳು ಮಾತ್ರ ಸುಣ್ಣ ಹಚ್ಚಿದ ಗೋಡೆ
ನಾನು ಕಾಯುತ್ತಿದ್ದೇನೆ….

12 thoughts on “ನಾನು ಕಾಯುತ್ತಿದ್ದೇನೆ….

  1. ನವಿಲಗರಿ ಹೇಳುತ್ತಾರೆ:

    ತುಂಬಿದ ಕಣ್ಣುಗಳ ಅಂಚಿಂದ
    ಜಾರಲಿರುವ ಹನಿಗಳ ಅಲ್ಲೇ ಆರಿಸಬೇಕಿದೆ
    ನಾನು ಕಾಯುತ್ತಿದ್ದೇನೆ….

    idu kalpane aNdre..:) kandita bartaane..please kaayodu nillisabedi..

  2. neelihoovu ಹೇಳುತ್ತಾರೆ:

    “ತುಂಬಿದ ಕಣ್ಣುಗಳ ಅಂಚಿಂದ
    ಜಾರಲಿರುವ ಹನಿಗಳ ಅಲ್ಲೇ ಆರಿಸಬೇಕಿದೆ”

    “ನೀ ಹೋದ ರಭಸಕ್ಕೆ ಬಿದ್ದ ಕನಸಿನ ರೆಕ್ಕೆಯ
    ಮತ್ತೆ ಜೋಡಿಸಿಕೊಳ್ಳಲೆಂದು”

    ಈ ಎರಡು ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ತಾ ಇದ್ದೇನೆ..:-)

    ನೀವು ಹೀಗೆ ಕಾದರೆ ಅಂವ ಬರೋದು ಗ್ಯಾರೆಂಟಿ !

  3. skhalana ಹೇಳುತ್ತಾರೆ:

    “ತುಟಿಗಳಿನ್ನೂ ಬಣ್ಣ ಕಳೆದುಕೊಂಡಿಲ್ಲ
    ಕಣ್ಣುಗಳು ಮಾತ್ರ ಸುಣ್ಣ ಹಚ್ಚಿದ ಗೋಡೆ”

    ಆಶೆ ನಿರಾಶೆಗಳ ಸುಂದರ ಬಣ್ಣನೆ, Good one !

  4. ಖುಷಿ ಹೇಳುತ್ತಾರೆ:

    “ಬಿಗಿದ ಮುಷ್ಠಿ ಅದರ ಬಿಸಿಗೇ
    ಬೆವರುವ ಮೊದಲು ಬೆರಳೊ೦ದು ಜೊತೆಯಾದೀತು
    ನಾನು ಕಾಯುತ್ತಿದ್ದೇನೆ…”

    “ತುಂಬಿದ ಕಣ್ಣುಗಳ ಅಂಚಿಂದ
    ಜಾರಲಿರುವ ಹನಿಗಳ ಅಲ್ಲೇ ಆರಿಸಬೇಕಿದೆ
    ನಾನು ಕಾಯುತ್ತಿದ್ದೇನೆ….”

    “ಕಾಯುತ್ತಿದ್ದೇನೆ ಎದೆಯಲ್ಲಿ ಬಣ್ಣದ ಚಿತ್ತಾರ ಮೂಡಿಸಿಕೊಳ್ಳಲೆಂದು
    ನೀ ಹೋದ ರಭಸಕ್ಕೆ ಬಿದ್ದ ಕನಸಿನ ರೆಕ್ಕೆಯ
    ಮತ್ತೆ ಜೋಡಿಸಿಕೊಳ್ಳಲೆಂದು”

    ಇವು ಮೂರೂ ಬಹಳ ಬಹಳ ಬಹಳ ಚನ್ನಾಗಿದೆ!
    ಎಷ್ಟು ಚಂದ ಬರಿತಿರಲ್ಲರೀ 🙂

  5. ಬಾಲ್ಕನಿಯಲ್ಲಿ ಒಬ್ಬನೇ ಕೂತು ಓದಲಿಕ್ಕೆ ಲಾಯಕ್ಕಾದ ಕವಿತೆ.. ಇನ್ನಷ್ಟು ಚಂದದ ಸಾಲುಗಳು….

  6. ಶೆಟ್ಟರು (Shettaru) ಹೇಳುತ್ತಾರೆ:

    “ಕಾಯುತ್ತಿದ್ದೇನೆ ಎದೆಯಲ್ಲಿ ಬಣ್ಣದ ಚಿತ್ತಾರ ಮೂಡಿಸಿಕೊಳ್ಳಲೆಂದು
    ನೀ ಹೋದ ರಭಸಕ್ಕೆ ಬಿದ್ದ ಕನಸಿನ ರೆಕ್ಕೆಯ
    ಮತ್ತೆ ಜೋಡಿಸಿಕೊಳ್ಳಲೆಂದು”

    ಚಂದದ ಸಾಲುಗಳು

    ಪ್ರೀತಿಯಿರಲಿ

    -ಶೆಟ್ಟರು, ಮುಂಬಯಿ

  7. ಭಾಗ್ವತ್ರು ಹೇಳುತ್ತಾರೆ:

    ಇನ್ನೂ ಕಾಯ್ತಿದೀರಾ, ವೈಶಾಲಿ? ನಾಳೆ ಬೆಳಿಗ್ಗೆ ಫಸ್ಟ್ ಬಸ್ಸಿಗೆ ಬರ್ತಾರೆ, ಬಿಡಿ. ಯೋಚ್ನೆ ಮಾಡ್ಬೇಡಿ 🙂

  8. ವೈಶಾಲಿ ಹೇಳುತ್ತಾರೆ:

    ಎಲ್ಲರಿಗೂ ತುಂಬಾ ತುಂಬಾ ತುಂಬಾ ತುಂಬಾ ………….ತುಂಬಾನೇ ಥ್ಯಾ೦ಕ್ಸೂ …..

    ನವಿಲುಗರಿ, ನೀಲಿಹೂವು..
    ನೀವೆಲ್ಲ ಇಷ್ಟು ಧೈರ್ಯ ಕೊಡ್ತೀದೀರಿ ಅಂದ್ರೆ ನಾನು ಕಾದೆ ಕಾಯ್ತೀನಿ! ಅವನು ಬರಲೇಬೇಕು! 🙂

    ವಿಜಯರಾಜ್, ನಾಯಕ್, ಖುಷಿ…
    ಹೊಗಳಿಕೆ ಅತಿ ಆಯ್ತು ಅನಿಸ್ತಿಲ್ವಾ? 🙂
    ಅದರೂ.. ಪ್ರೀತಿಯಿರಲಿ

    ಜಿತೇಂದ್ರ, ಶೆಟ್ಟರು..
    ಧನ್ಯವಾದಗಳು ಸಾರ್….. ನಂಗೂ ಬರೆಯೋ ಉಮೇದಿ ಹೆಚ್ತಿದೆ!

    ಭಾಗ್ವತ್ರೆ,
    ಈಗ ರಂಗಸ್ಥಳಕ್ಕೆ ಕಳೆ ಬಂತು ನೋಡಿ! 🙂
    ನಾನೂ ಫಸ್ಟ್ ಬಸ್ ಗೆ ಕಾಯ್ತಾ ಇದ್ದೀನಿ..ಯಾರೋ ಇಳ್ದ೦ಗಿದೆ ತಡೀರಿ, ನೋಡ್ಕೊಂಡ್ ಬರ್ತೀನಿ….

  9. kallare ಹೇಳುತ್ತಾರೆ:

    jaaraliruva hanigal “ALLE’ aarisabekide…. e alle anno shabda tumba kaadutte madam,

    best,

  10. ಶಿವು.ಕೆ ಹೇಳುತ್ತಾರೆ:

    ತುಂಬಿದ ಕಣ್ಣುಗಳಿಂದ ಜಾರಿದ….. ಪದ್ಯದ ಭಾಗ ತುಂಬಾ ಇಷ್ಟವಾಯಿತು. ಹೀಗೆ ಬರೆಯುತ್ತಿರಿ.
    ಆಹಾಂ! ಮತ್ತೆ ಮತ್ತೆ ಬ್ಲಾಗಿಗೆ ಬಂದು ನನ್ನ ಉಳಿದ ಲೇಖನಗಳನ್ನು ನೋಡಿ. ಅಲ್ಲಿ ಫೋಟೊಗಳೀವೆ ಮತ್ತು ಅದಕ್ಕೆ ಸಂಬಂದಪಟ್ಟ ಲೇಖನಗಳಿವೆ. Thanks.

ನಿಮ್ಮ ಟಿಪ್ಪಣಿ ಬರೆಯಿರಿ