ರಾಧೆಯೊಳಗಿಂದ…………….

( ಇದು ಎನಿಗ್ಮಾದಲ್ಲಿ ರಾಧಾ ಪರ್ವದೊಳಗೆ ಪ್ರಕಟಗೊಂಡ ನನ್ನ ಕವಿತೆ. ವಿರಹಿ ರಾಧೆಯನ್ನು ಹಲವು ಕೋನಗಳಲ್ಲಿ ನೋಡುವ ಯತ್ನ ಅನೇಕರದ್ದು.  ಆದರೆ  ರಾಧೆಯನ್ನು ರಾಧೆಯಾಗೇ ನೋಡುವ ಚಿಕ್ಕ ಪ್ರಯತ್ನ ನನ್ನದು. )

ಮೌನಧ್ವನಿ…
ಕೂಗೆಂದರು, ಆರ್ತನಾದವೆಂದರು
ವಿರಹದ ತುತ್ತ ತುದಿಯೆಂದರು…
ನನ್ನ ಭಾವಕ್ಕೆ ನೂರೊಂದು ನಾಮ…

ದೇಹ ಸುಕ್ಕುಗಟ್ಟಿದೆ
ವರ್ತುಲಗಳು ಈಗ ಕಣ್ಣಸುತ್ತ
ಹಾದಿಯಲ್ಲಿನ್ನೂ ಕೃಷ್ಣನ ಹೆಜ್ಜೆ ಗುರುತು ಅಳಿಸಿಲ್ಲ

ಇಣುಕಿ ನೋಡಿದವರಿಲ್ಲ ನನ್ನೊಳಗೆ
ಕಿವಿಗೊಟ್ಟರಷ್ಟೇ ಕೇಳೀತು ಎದೆಯೊಳಗೆ
ಅಂವ ನುಡಿಸಿದ ಕೊಳಲ ನಾದ
ಮಡಿಲ ಮೇಲೆ ತಲೆಯಿಟ್ಟ ಬಿಸಿಯಿನ್ನೂ ಆರಿಲ್ಲ
ಪ್ರೀತಿ ಗುಪ್ತಗಾಮಿನಿ……

ಬಾ ಎಂದರೆ ಹೋಗುತ್ತಿದ್ದೆ
ಹದಿನಾರು ಸಾವಿರ ಕಾಲ್ಗೆಜ್ಜೆಗಳ ನಡುವೆ
ನನ್ನದೂ ಒಂದು ನಾದ
ಅರಮನೆಯ ಕಂಬಗಳ ಮಧ್ಯೆ ಕಣ್ಣುಮುಚ್ಚಾಲೆ
ಹತ್ತರಲ್ಲಿ ಹನ್ನೊಂದು…

ರಾಧೆಯೆಂದರೆ ಪ್ರೀತಿ, ರಾಧೆಯೆಂದರೆ ವಿರಹ
ರಾಧೆಯೆಂದರೆ ಪ್ರತೀಕ್ಷೆ…
ಕಾತರ ಕಣ್ಗಳಲ್ಲಷ್ಟೇ ಸಂಶಯದ ಸುಳಿ ಎದೆಯಲ್ಲಿಲ್ಲ
ತಲ್ಲಣಗಳು ಕಾಡಿದ್ದು ಕಡಿಮೆ
ಕೃಷ್ಣ ಬೃಂದಾವನದಷ್ಟೇ ದಿಟ…

ನವಿಲುಗರಿಯ ಕಣ್ಣು, ಕೊಳಲೆತ್ತಿಕೊಂಡೊಡನೆ
ಕೇಳೀತು ನನ್ನಲ್ಲಿ ಬಿಟ್ಟು ಹೋದ
ಮುರಿದ ಕೊಳಲಿನ ಒಡಕು ನಾದ
ಮಧುರೆ ಕಣ್ಣಂಚಿನ ಚಿತ್ರ
ತಿರುಗಿ ಬರಲೆಷ್ಟು ಹೊತ್ತು?

ಮೊಹಿಸಿದ್ದು ಚೆಲುವನ್ನಷ್ಟೇ
ಪ್ರೀತಿ ಎದೆಯಾಂತರಾಳದ್ದು
ಗೋಕುಲದ ಇ0ಚಿಂಚಿನಲ್ಲೂ ಅವನ ಪ್ರೇಮ ಹಾಸುಹೊಕ್ಕು
ರಾಧೆ ರಾಧೆಯೇ… ಮೆಚ್ಚಿ ಒಲವೆನಿಸಿಕೊಂಡವಳು
ಕೃಷ್ಣನಿಗೆ ಕೊಳಲಾದವಳು…….
ಕಾದವಳು… ಕಥೆಯಾದರೂ ಕೊನೆಯಿಲ್ಲದವಳು…

Advertisements

7 thoughts on “ರಾಧೆಯೊಳಗಿಂದ…………….

 1. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ವಾಹ್…ವಾಹ್….ಮಾರ್ವಲೆಸ್

 2. ರಂಜಿತ್ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ ಮೇಡಂ…

  ಬರೆವಾಗಲಾದರೂ ಸ್ವಲ್ಪ ಹೊತ್ತು ರಾಧೆಯಾಗಿದ್ದಿರಲೇಬೇಕು ನೀವು..
  ಇಲ್ಲವಾದರೆ ಇಷ್ಟು ಚಂದವಾಗಿ ಮೂಡಿಬರುತ್ತಿರಲಿಲ್ಲ..:-)

 3. skhalana ಹೇಳುತ್ತಾರೆ:

  ಕಥೆಯಾದರೂ ಕೊನೆಯಿಲ್ಲದವಳು…
  ತುಂಬಾ ಚೆನ್ನಾಗಿದೆ ! ಅದ್ಭುತ ವರ್ಣನೆ

 4. radhakrishna ಹೇಳುತ್ತಾರೆ:

  ರಾಧೆಯ ಮತ್ತೊಂದು ಮುಖ…………….

 5. bapuneeth ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ ಅಕ್ಕ…
  ನೀವು ಕನ್ನಡಕ್ಕೆ ಒಂದು ಕೊಡುಗೆ…

  ಒಮ್ಮೆ ನನ್ನ ಬ್ಲಾಗನ್ನು ನೋಡಿ:
  http://www.haagesummane.wordpress.com

 6. ವೈಶಾಲಿ ಹೇಳುತ್ತಾರೆ:

  ಬಾಲ್ಕನಿಗೆ ಬಂದ, ಕವಿತೆ ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್!

  ರಂಜಿತ್,
  ಹಂಗಂತೀರಾ? ಇರಬಹುದೇನೋ…. 🙂

  baapuneet,
  ಪುನೀತ್, ಹೊಗಳಿಕೆ ಅತಿಯಾಯ್ತು ಅನ್ನಿಸ್ತಿಲ್ವಾ? ನಾನಿನ್ನೂ ಸಾಹಿತ್ಯದ ಮೊದಲ ಮೆಟ್ಟಿಲನ್ನೂ ಹತ್ತಿಲ್ಲ. ಕಲಿಯುವುದು, ಬರೆಯುವುದು ಇನ್ನೂ ತುಂಬಾ ಇದೆ! ಆಗಾಗ ಬರ್ತಾ ಇರಿ. ಪ್ರೀತಿಯಿರಲಿ.

 7. kallare ಹೇಳುತ್ತಾರೆ:

  Raadhe raadheyagilla. raagavaagiddale.
  gokulada kolala dhwaniyaagiddale…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s