ಹನಿ ಹಿಮವಾಗುವ ಮುನ್ನ…..

ಈ ಚಳಿ ಮುಗಿಯುವ ಲಕ್ಷಣಗಳೇ ಇಲ್ಲವೇನೋ… ಬೆಳಿಗ್ಗೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಮೈಮುರಿಯುತ್ತ ಬಾಲ್ಕನಿಯಲ್ಲಿ ಬಿಸಿಲು ಕಾಯಿಸುವ ಹಾಗಿಲ್ಲ… ಬಿಸಿ ಬಿಸಿ ಕಾಫಿಯೊಡನೆ ಪೇಪರ್ ನೊಳಗೆ ಮುಳುಗಿ ಹೋಗುವ ಹಾಗಿಲ್ಲ. ಬಾಲ್ಕನಿಯ ಅಂಚಲ್ಲಿ ಒಬ್ಬಳೇ ಕೂತು ನೆನಪು, ಕನಸುಗಳ ಮಧ್ಯೆ ಕಳೆದು ಹೋಗುವಂತಿಲ್ಲ……. ಬರೀ ‘ಇಲ್ಲ’ ಗಳೇ ತುಂಬಿಹೊಗಿರೋ ಜಗತ್ತಾಗಿಬಿಟ್ಟಿತೇನೋ ಎಂಬಂತೆ……

ಇನ್ನೊಂದು ತಿಂಗಳಿಗೆ ಮಳೆ ಹಿಮವಾಗಬಹುದು. ಜೀವನದಲ್ಲಿ ಒಮ್ಮೆಯಾದರೂ ಹಿಮದ ಮಳೆಯ ನಡುವೆ ಕುಣಿದಾಡಬೇಕು ಎಂಬ ಕನಸಿತ್ತು. ಆದರೆ ಈಗಿನ ಕಷ್ಟ ಆ ಕನಸಿನ ಮುಂದುವರಿದ ಭಾಗ! ಮನೆಯೊಳಗೆ ನಾನು ಬೀರುವಿನಲ್ಲಿರುವ ಎಲ್ಲ ಸ್ವೆಟರ್, ಶಾಲುಗಳನ್ನ ತೆಗೆತೆಗೆದು ಹಾಕಿಕೊಳ್ಳುತ್ತಿದ್ದರೆ ಮನೆಯ ಹೊರಗೆ ಮರಗಿಡಗಳೆಲ್ಲ ಎಲೆಗಳನ್ನೆಲ್ಲ ಕೆಂಪು, ಹಳದಿಯಾಗಿಸಿ ಉದುರಿಸಿಕೊಳ್ಳುತ್ತ ಬೆತ್ತಲಾಗುತ್ತಿವೆ.

ಯುರೋಪ್ ದೇಶಗಳಲ್ಲಿ ಫಾಲ್ ( Fall ) ಶುರುವಾಯಿತೆಂದರೆ ಕಣ್ಣು, ಕ್ಯಾಮರಾಗಳಿಗೆಲ್ಲ ಹಬ್ಬ. ಹಾದಿಯ ಪಕ್ಕದ ಹಚ್ಚ ಹಸಿರೆಲ್ಲ ನಿಧಾನಕ್ಕೆ ಹಳದಿ, ಕೆಂಪು ಬಣ್ಣಕ್ಕೆ ತಿರುಗುತ್ತವೆ. ಉದರುವ ಎಲೆಗಳಿಂದಾಗಿ ರಸ್ತೆ, ಕಾಲುದಾರಿಗಳೂ ಕೆಂಪಾಗುತ್ತವೆ. ಇಡೀ ವಾತಾವರಣವೇ ಬಣ್ಣದಿಂದ ತುಂಬಿಹೋದಾಗ ಮನಸು ಸುಮ್ಮನಿದ್ದೀತು ಹೇಗೆ? ಕಪ್ಪು ಬಿಳುಪು ಕನಸುಗಳೆಲ್ಲ ಇಲ್ಲಿ ರಂಗು ಪಡೆದುಕೊಳ್ಳುತ್ತವೆ… ಪುಟ್ಟ ಮಗುವಿನ ಕೆನ್ನೆಯ ಕೆಂಪಿನಂತೆ, ಮದುಮಗಳ ಕೈಗಳ ಮದರಂಗಿಯಂತೆ….. ಎಲ್ಲೆಡೆ ಎಂಥದ್ದೋ ಸಡಗರ. ಹೊಸದೇ ಜಗತ್ತು….

ನೆಲವನ್ನೆಲ್ಲಾ ಕೆಂಪಾಗಿಸಿ ಜನರ ಕಣ್ಣು ತಂಪಾಗಿಸುವ ಮರಗಳು ಒಂದಾರು ತಿಂಗಳ ಕಾಲ ಕೊರೆಯುವ ಚಳಿಗೆ ಮೈಯೊಡ್ಡಿ ನಿಂತುಬಿಡುತ್ತವೆ. ಕನಸುಗಳನ್ನೆಲ್ಲ ಕಳೆದುಕೊಂಡ ಭಗ್ನಪ್ರೇಮಿಯಂತೆ.. ವಿರಹಿಯಂತೆ… ರೆಂಬೆ ಕೊಂಬೆಗಳ ಮೇಲೆ ಇಂಚಿಂಚೂ ಬಿಡದೆ ಹಿಮ ಆವರಿಸಿಕೊಳ್ಳುತ್ತದೆ.

ಮನೆಯಿಂದ ಹೊರಗೆ ಕಾಲಿಟ್ಟರೆ ನಿಂತಲ್ಲೇ ಮರಗಟ್ಟಿ ಹೋಗುವ ಸ್ಥಿತಿ. ಅಷ್ಟಾಗಿಯೂ ಹೋಗಲೇಬೇಕೆಂದರೆ ಇದ್ದಬದ್ದ ಸ್ವೆಟರ್, ಝರ್ಕಿನು, ಟೊಪ್ಪಿ, ಗ್ಲೌಸು ಅಂತೆಲ್ಲ ಸುತ್ತಿಕೊಂಡು ಕಣ್ಣೆರಡು ಮಾತ್ರ ಪಿಳಿಗುಟ್ಟಿಸಿಕೊಂಡು ಹೋಗಬೇಕು! ಅಂಥ ಹೊತ್ತಲ್ಲಿ ಕವನ ಕನಸು ಅಂತೆಲ್ಲ ಸಾಯಲಿ, ವಾಪಸ್ ಮನೆಗೆ ಹೋದರೆ ಸಾಕು ಅನ್ನಿಸಿಬಿಡುತ್ತದೆ. ಪ್ರಕೃತಿಯದ್ದಾದರೂ ಅದಿನ್ನೆ೦ತೆ೦ತ ಮಾಯೆಯೋ…

ಒಂದು ಕಡೆ ಹಾಗಾದರೆ ಇತ್ತ
ಪ್ಯಾರ್ ಕಾ ಪೆಹಲಾ ಖತ್ ಲಿಖನೇ ಮೇ ವಕ್ತ್ ತೋ ಲಗತಾ ಹೇ
ನಯೀ ಪರಿಂದೋ ಕೋ ಉಡನೇ ಮೇ ವಕ್ತ್ ತೋ ಲಗತಾ ಹೇ….
ಅಂತ ಯಾರ್ಯಾರದೋ ತಳಮಳಗಳನ್ನೆಲ್ಲ ತನ್ನದೇ ಎಂಬಂತೆ ಅನುಭವಿಸಿ ಹಾಡುವ ಜಗಜಿತ್ ಸಿಂಗ್ ನನ್ನ ಬಾಲ್ಕನಿಯಲ್ಲಿ ಹೊಸ ಲೋಕ ಸೃಷ್ಟಿಸುತ್ತಾನೆ.. ಆಗ ಮಾತ್ರ ನಾನು ಹೊರಗಿನ ಚಳಿ, ಒಳಗಿನ ಬೇಸರ, ಮನೆ, ಕೆಲಸ…ಅಂತೆಲ್ಲ ಈ ಲೋಕ ಮರೆತು ಹಾಡಿನೊಳಗೆ, ಬಾಲ್ಕನಿಯ ಕನಸುಗಳ ನಡುವೆ ಕಳೆದು ಹೋಗುತ್ತೇನೆ ……..

Advertisements

13 thoughts on “ಹನಿ ಹಿಮವಾಗುವ ಮುನ್ನ…..

  1. ಭಾಗ್ವತ್ರು ಹೇಳುತ್ತಾರೆ:

    ವೈಶಾಲಿ,

    ಈ ಚಿತ್ರ ಸೂಪರಾಗಿದೆ. ನಿಮ್ಮದೇ ಕೈಚಳಕವಾ? ಅಥವಾ ಎಗರಿಸಿದ್ದಾ? 🙂 ಯೂರೋಪಲ್ಲಿ ಎಲ್ಲಿದ್ದೀರಿ? ಅಲ್ಲಿ ಚಳಿಯನ್ನ ತಡೆಯಲಿಕ್ಕಾಗಿ ವೈನು, ಬಿಯರು ಎಲ್ಲ ಕುಡಿತಾರಂತೆ…ಸುಮ್ನೆ ನಿಮ್ಮ ಮಾಹಿತಿಗೆ ಇರ್ಲಿ ಅಂತ ಹೇಳಿದ್ದು ಅಷ್ಟೆ:-)

  2. kallare ಹೇಳುತ್ತಾರೆ:

    Raindrops on roses and whiskers on kittens;
    Bright copper kettles and warm woolen mittens;
    Brown paper packages tied up with strings;
    These are a few of my favorite things.

    Cream-colored ponies and crisp apple strudels;
    Doorbells and sleigh bells and schnitzel with noodles;
    Wild geese that fly with the moon on their wings;
    These are a few of my favorite things.

    Girls in white dresses with blue satin sashes;
    Snowflakes that stay on my nose and eyelashes;
    Silver-white winters that melt into springs;
    These are a few of my favorite things.

    When the dog bites,
    When the bee stings,
    When I\’m feeling sad,
    I simply remember my favorite things,
    And then I don\’t feel so bad.

    ello tegditta saalugalna hudki tegdiddaytu ma’am….

    nice…

  3. ಶಿವು.ಕೆ ಹೇಳುತ್ತಾರೆ:

    ಚೆನ್ನಾಗಿ ಬರೆದಿದ್ದೀರಿ, ಓದುತ್ತಿದ್ದರೆ ಚಿತ್ರ ಕಣ್ಣಿಗೆ ಕಣ್ಣುವಂತೆ ವರ್ಣನೆಯಿದೆ. ಈಗ ಎಲ್ಲಿದ್ದೀರಿ. ಯಾವ ಮೂಲೆಯಲ್ಲಿ. ಇದರ ಬಗ್ಗೆ ಮುಂದೆ ಬರೆಯುತ್ತಾ ಹೋಗಿ…. ಕಾಯುತ್ತೇನೆ.

    ನಾನು ಶಿವು.ಕೆ ಅಂತ ಛಾಯಾಗ್ರಾಹಕ. ನನ್ನ ಬ್ಲಾಗಿನೊಳಗೆ ಬನ್ನಿ ಅಲ್ಲಿ ನಿಮಗಿಷ್ಟವಾಗುವ ಲೇಖನ ಹಾಗೂ ಛಾಯಾಚಿತ್ರಗಳು ಸಿಗಬಹುದು.
    ನನ್ನ ಬ್ಲಾಗ್ ವಿಳಾಸ:
    http://chaayakannadi.blogspot.com/
    ಮತ್ತೊಂದು ವಿಭಿನ್ನ ಬರವಣಿಗೆ ಓದುವ ಆಸೆ ಬಂದರೆ:
    http://chaayakannadi.blogspot.com/

  4. ಶಿವು.ಕೆ ಹೇಳುತ್ತಾರೆ:

    ಕ್ಷಮಿಸಿ;

    ನನ್ನ ಮತ್ತೊಂದು ಬ್ಲಾಗ್ ವಿಳಾಸ :
    http://camerahindhe.blogspot.com/
    ಶಿವು.ಕೆ

  5. ರಂಜಿತ್ ಹೇಳುತ್ತಾರೆ:

    ಚಳಿ ಬಗ್ಗೆ ಬರೆಯಬೇಕೆಂದು ಕೂತಿದ್ದೇನೆ ವೈಶಾಲಿಯವರೇ , ನಮ್ಮೂರಲ್ಲಿ ಇನ್ನು ಚಳಿ ಸರಿಯಾಗಿ ಶುರುವಾಗಿಲ್ಲ..

    ಹೊಸದಾಗಿ ಅನುಭವಕ್ಕೆ ಬಂದಿಲ್ಲದ್ದರಿಂದ ಯಾಕೋ ಕಾಡುತಿಲ್ಲ… ಹಾಗಾಗಿ ಬರೆಯಲು ಸಾಧ್ಯ ಆಗ್ತಿಲ್ಲ..

    ನಾನು ಬರೆಯುವ ಮುನ್ನವೇ ಅದ್ಭುತವಾಗಿ ಬರೆದು ಮುಗಿಸಿದೀರಲ್ಲ?!

    ಹಾಗೆ ಚಳಿಯ ಕವನವೂ ಬರಲಿ…

  6. ಖುಷಿ ಹೇಳುತ್ತಾರೆ:

    ಮತ್ತಷ್ಟು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿ ವೈಶಾಲಿಯವರೇ..
    ನೋಡಿ ಖುಷಿ ಪಟ್ಟ್ಕೋತಿವಿ 🙂

  7. Pramod ಹೇಳುತ್ತಾರೆ:

    ಕ್ಯಾಮೆರಕ್ಕಾಗಿ ಕೈ ಹೊರ ತೆಗೆದರೆ ಚಳಿ ಕೈಯನ್ನೇ ಮರಗಟ್ಟಿಸುತ್ತದೆ!! ನೀವು ನಮಗಿ೦ತ ಇನ್ನೂ ಒ೦ದು ಘ೦ಟೆ ಹಿ೦ದೆ ಬಿದ್ರಿ ಅನ್ಸುತ್ತೆ. ‘Day light saving’ 🙂 Day light save ಮಾಡಿ ಜಾಸ್ತಿ ಕನಸು ಕಾಣಿರಿ 🙂

  8. ವೈಶಾಲಿ ಹೇಳುತ್ತಾರೆ:

    ನೀಲಾಂಜಲಾ,
    ಧನ್ಯವಾದಗಳು 🙂

    ಭಾಗ್ವತ್ರೆ,
    ಮೊದಲು ಹಾಕಿದ ಫೋಟೋ ಎಗರಿಸಿದ್ದೇ. ಈಗಿನದು ಸ್ವಂತದ್ದು!. ಆದ್ರೆ ನನ್ ಕೈ ಚಳಕಾನೂ ತೋರಿಸ್ಬೇಕಂತಿದೆ. ಒಂದೆರಡು ದಿನ ತಡೀರಿ. ಅಂದ್ಹಂಗೆ ನೀವು ಹೇಳಿದ್ದೇನೋ ಹೌದು, ಆದ್ರೆ ಟ್ರೈ ಮಾಡೋಣ ಅಂದ್ರೂ ಚಳಿ ಬಿಡೋಲ್ವೇ !! 😉
    ಕಾಲೆಳೆದರೆ ಬೇಜಾರು ಏನಿಲ್ಲ ಬಿಡಿ. ನಿಮಗೊಂದು ಮಸಾಲೆ ದೋಸೆ ಕಮ್ಮಿ ಆಗಬಹುದೇನೋ! ಹ್ಹ ಹ್ಹಾ !

    ಕಲ್ಲಾರೆಯವ್ರೆ,
    ಇವು ನಿಮ್ಮದೇ ಸಾಲುಗಳಾ? ಹೌದು ಅಂತಾದ್ರೆ ಇದು ಅನ್ಯಾಯ ಕಣ್ರೀ…
    ನನ್ನ ಬರಹ ಈಗ ಮಂಕಾಗಿ ಬಿಡ್ತು ನೋಡಿ 😦

    ಶಿವು.ಕೆ,
    ಸ್ವಾಗತ. ಹಾಗೆ ಧನ್ಯವಾದಗಳು ಕೂಡ. ಮೆಚ್ಚಿಕೊಂಡಿದ್ದಕ್ಕೆ. ಬರ್ತಾ ಇರಿ.

    ರಂಜಿತ್,
    ನೀವೇ ಹಿಂಗಂದ್ರೆ ಹೇಗೆ? ಇಲ್ಲಿ ಚಳಿಗೆ ನಾವು ಒದ್ದಾಡ್ತಿರೋದೇ ಸಾಕು, ನೀವು ಊರಿನ ಖುಷಿಯನ್ನ ಸ್ವಲ್ಪ ನಮಗೂ ಕಟ್ಟಿಕೊಡಿ ಮಾರಾಯ್ರೆ!

    ಖುಷಿ,
    ನಿಮ್ಮ ಬೇಡಿಕೆಯನ್ನು ಪರಿಗಣಿಸಲಾಗಿದೆ 😉

    ಪ್ರಮೋದ್,
    ಹೌದು 🙂 ಈಗ ಹಗಲುಗನಸುಗಳು ಕಮ್ಮಿಯಾಗಿ ರಾತ್ರಿ ಕನಸುಗಳ ಸಂಖ್ಯೆ ಜಾಸ್ತಿ ಆಗ್ತಾ ಇದೆ ! 🙂

  9. M G Harish ಹೇಳುತ್ತಾರೆ:

    ವೈಶಾಲಿಯವರೇ, ಚೆನ್ನಾಗಿ ಬರೆದಿದ್ದೀರಿ. ಚಳಿ ಈಗ ಹೇಗಿದೆ?

    ಕನ್ನಡ ನೀಲಾಂಜಲ, ಇಂಗ್ಲಿಷ್ ನೀಲಾಂಜಲ ಇಬ್ಬರ ಪ್ರತಿಕ್ರಿಯೆಗಳನ್ನೂ ಒಂದೆಡೆ ನೋಡಿ ಖುಷಿಯಾಯಿತು.

  10. neelanjala ಹೇಳುತ್ತಾರೆ:

    harish,
    ಕನ್ನಡ ನೀಲಾಂಜಲ, ಇಂಗ್ಲಿಷ್ ನೀಲಾಂಜಲ
    hihihi, aa tarahavenu illa kanri. vaishaliyavaru modalidda photo change madidru. adakke matte replyisiddu. matte nivu neelanjaNa urf hamsanandi jotegege nanna confuse maDikollabedi marayre.

  11. ವೈಶಾಲಿ ಹೇಳುತ್ತಾರೆ:

    ನೀಲಾಂಜಲಾ,
    thanksu… ನಂಗೂ ಈ ಇಂಗ್ಲಿಷ್ ನೀಲಾಂಜಲಾ, ಕನ್ನಡ ನೀಲಾಂಜಲಾ ಏನೂಂತ ಅರ್ಥವಾಗದೆ ಸುಮ್ಮನಿದ್ದೆ. ಈಗ ತಲೆಗೆ ಹೋಯ್ತು. 🙂

    ಹರೀಶ್,
    ಬಲಗಾಲಿಟ್ಟು ಬನ್ನಿ ಬ್ಲಾಗೊಳಗೆ 🙂 ಸ್ವಾಗತ.
    ಚಳಿ ಕಡಿಮೆ ಆಗೋ ಯಾವ ಲಕ್ಷಣಗಳಿಲ್ಲ ಬಿಡಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s