ಬಿಂಬಗಳೇ ಕಾಡದಿರಿ ನನ್ನ….

ಮಳೆಯ ಮರುದಿನ ಅಂಗಳದಲ್ಲಿ
ಪುಟ್ಟ ಹೆಜ್ಜೆಯ ಗುರುತು
ಎಲೆಗಳ ಮೇಲೆಲ್ಲ ಕೆಸರಿನ ಸಾಮ್ರಾಜ್ಯ
ಹನಿಗಳ ಸದ್ದು ಕೇಳಿದ್ದು
ಸುಮ್ಮನಿದ್ದಾಗ ಮಾತ್ರ
ಬಿಂಬಗಳೇ ಕಾಡದಿರಿ ನನ್ನ

ಮಾತುಗಳೆಲ್ಲ ಅಂದಿಗೇ ಕರಗಿಹೋದವು
ಉಳಿದಿದ್ದು ಗಾಢ ಮೌನ
ಹೇಳಬೇಕೆಂದಿದ್ದು ಹೇಳದೆ
ಕೇಳಿಸಿದ್ದು ಕೇವಲ ನಿಟ್ಟುಸಿರ ಸದ್ದು

ಗೌಜಿನ ರಸ್ತೆಯಲ್ಲಿ ಸಾವಿರ ಜನರಿದ್ದೂ
ಅನಾಥವಾದ ಯಾರದೋ ಕರ್ಚೀಪು
ನಾ ಕೊಟ್ಟ ಮೊದಲ ಗಿಫ್ಟಿಗೆ
ಒದ್ದೆಯಾದ ಅವನ ಕಣ್ಣುಗಳು
ಬಿಂಬಗಳಿಗೆ ಕೊನೆಯಿಲ್ಲ

ಕನಸುಗಳೆಲ್ಲ ಹರಡಿಕೊಂಡಿದ್ದವು
ನೀ ಎದ್ದು ಹೋದ ಸದ್ದು ಕೇಳಲೇ ಇಲ್ಲ
ಕಾಡಿದ್ದು ಮೇಜಿನ ಮೇಲುಳಿದ
ಚಹಾ ಕಪ್ಪಿನ ಉಂಗುರಗಳಷ್ಟೇ

ಬೀಳುವ ಮಳೆನೀರಿಗೆ
ಕೈ ಹಿಡಿದು ಸಂಭ್ರಮಿಸಿದ್ದು
ಬೆರಳುಗಳು ಒಣಗಿವೆ ಮನಸ್ಸಿನ್ನೂ
ಆ ನೆನಪಲ್ಲೇ ಒದ್ದೆ ಒದ್ದೆ
ಬಾಲ್ಯದ ಬಿಂಬ ಕಣ್ಣತುಂಬ

ಆಟ ಮುಗಿಸಿ ಎದ್ದು ಹೋದ ಮಗು
ಗೊ೦ಬೆಗಿನ್ನು ಜೊತೆಯಿಲ್ಲ
ಅರ್ದಕ್ಕೇ ಬಿಟ್ಟೆದ್ದ ಊಟ
ಮುಗಿಸದೇ ಬಿಟ್ಟ ಮಾತು
ಕಾಡಿದ್ದು ಎಷ್ಟೋ ದಿನ

ಜೊತೆಯಾದ ಕನಸುಗಳು
ಹಾಡು ಹಾಡುವುದಿಲ್ಲ
ಕಾಡುವುದು ಒಂಟಿ ಬಿಂಬಗಳು ಮಾತ್ರ
ಬಿಂಬಗಳೇ ಮತ್ತೆ ಮತ್ತೆ ಕಾಡದಿರಿ ನನ್ನ…..

Advertisements

12 thoughts on “ಬಿಂಬಗಳೇ ಕಾಡದಿರಿ ನನ್ನ….

 1. Kallare ಹೇಳುತ್ತಾರೆ:

  ಬಿಂಬ ಕಾಡ್ತಿದೆ, ಬೇಡ ಅಂದ್ರೂ… ಹೆಜ್ಜೆ ಗುರುತೂ ಚೆನ್ನಾಗೇ ಮೂಡಿದೆ. 🙂

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ಕನಸುಗಳೆಲ್ಲ ಹರಡಿಕೊಂಡಿದ್ದವು
  ನೀ ಎದ್ದು ಹೋದ ಸದ್ದು ಕೇಳಲೇ ಇಲ್ಲ
  ಕಾಡಿದ್ದು ಮೇಜಿನ ಮೇಲುಳಿದ
  ಚಹಾ ಕಪ್ಪಿನ ಉಂಗುರಗಳಷ್ಟೇ

  ee saalugaLu thumbaa thumbaa ishta aaytu

 3. sunaath ಹೇಳುತ್ತಾರೆ:

  “ಗೊಂಬೆಗಿನ್ನು ಜೊತೆಯಿಲ್ಲ”……Wonderful!

 4. chetana chaitanya ಹೇಳುತ್ತಾರೆ:

  ChennAgide.

 5. ಶಿವು.ಕೆ ಹೇಳುತ್ತಾರೆ:

  ಕವನ ಚೆನ್ನಾಗಿದೆ.

 6. ಖುಷಿ ಹೇಳುತ್ತಾರೆ:

  ಮಾತುಗಳೆಲ್ಲ ಅಂದಿಗೇ ಕರಗಿಹೋದವು
  ಉಳಿದಿದ್ದು ಗಾಢ ಮೌನ
  ಹೇಳಬೇಕೆಂದಿದ್ದು ಹೇಳದೆ
  ಕೇಳಿಸಿದ್ದು ಕೇವಲ ನಿಟ್ಟುಸಿರ ಸದ್ದು…

  ಬೀಳುವ ಮಳೆನೀರಿಗೆ
  ಕೈ ಹಿಡಿದು ಸಂಭ್ರಮಿಸಿದ್ದು
  ಬೆರಳುಗಳು ಒಣಗಿವೆ ಮನಸ್ಸಿನ್ನೂ
  ಆ ನೆನಪಲ್ಲೇ ಒದ್ದೆ ಒದ್ದೆ
  ಬಾಲ್ಯದ ಬಿಂಬ ಕಣ್ಣತುಂಬ…

  ಈ ಎರಡು ಸಾಲುಗಳು ತುಂಬಾ ಚೆನ್ನಾಗಿವೆ !

 7. ರಂಜಿತ್ ಹೇಳುತ್ತಾರೆ:

  “ನಾ ಕೊಟ್ಟ ಮೊದಲ ಗಿಫ್ಟಿಗೆ
  ಒದ್ದೆಯಾದ ಅವನ ಕಣ್ಣುಗಳು”

  “ಬೀಳುವ ಮಳೆನೀರಿಗೆ
  ಕೈ ಹಿಡಿದು ಸಂಭ್ರಮಿಸಿದ್ದು
  ಬೆರಳುಗಳು ಒಣಗಿವೆ ಮನಸ್ಸಿನ್ನೂ
  ಆ ನೆನಪಲ್ಲೇ ಒದ್ದೆ ಒದ್ದೆ”

  “ಆಟ ಮುಗಿಸಿ ಎದ್ದು ಹೋದ ಮಗು
  ಗೊ೦ಬೆಗಿನ್ನು ಜೊತೆಯಿಲ್ಲ”

  ಕವನ ಓದಿ ಮುಗಿದು ಎಷ್ಟೋ ಹೊತ್ತಾಗಿದೆ. ಈ ಬಿಂಬಗಳಿನ್ನೂ ಉಳಿದಿವೆ ಮನದ ಪದರಗಳಲ್ಲಿ.

  ಈ ತರಹ ಬರೆಯುವುದನ್ನು ನನಗೂ ಹೇಳಿಕೊಡಿ…

 8. ವೈಶಾಲಿ ಹೇಳುತ್ತಾರೆ:

  ಕಲ್ಲಾರೆ,
  ಹಾಗಂತೀರಾ? ಥ್ಯಾಂಕ್ಸ್ ಕಣ್ರೀ..

  ವಿಜಯರಾಜ್,
  ಧನ್ಯವಾದಗಳು. ನನ್ನ ಸಾಲುಗಳು ನಿಮಗೆಲ್ಲ ಖುಷಿ ಕೊಟ್ಟಿತು ಅಂತಾದ್ರೆ ನಂಗೂ ಸಮಾಧಾನ, ಖುಷಿ. 🙂

  ಸುನಾಥ್ ಅವರೇ,
  ಮೆಚ್ಚಿಕೊಂಡಿದ್ದಕ್ಕೆ ಖುಷಿಯಾಯ್ತು. ಬರ್ತಾ ಇರಿ.

  ಥಾಂಕ್ಸ್ ಚೇತನಾ

  ಶಿವು, ಖುಷಿ,
  ನಾವು ಬರೆದಿದ್ದು ಓದಿದವರಿಗೆ ಇಷ್ಟ ಆಯ್ತು ಅಂದ್ರೆ ಅದಕ್ಕಿಂತ ಸಂತೋಷ ಬೇರೆ ಯಾವುದಿದೆ ಹೇಳಿ? ಥ್ಯಾಂಕ್ಸ್.

  ರಂಜಿತ್,
  ಅಷ್ಟಾದರೆ ಬರೆದಿದ್ದಕ್ಕೂ ಸಾರ್ಥಕ ಆಯ್ತು ಬಿಡಿ! ಆದ್ರೂ ಹೊಗಳಿಕೆ ಅತಿ ಆಯ್ತು ಅನ್ನಿಸ್ತಿಲ್ವಾ? 😉

 9. navada ಹೇಳುತ್ತಾರೆ:

  ವೈಶಾಲಿ ಅವರೇ,
  ಕವನ ಖುಷಿ ನೀಡಿತು.
  ಜೊತೆಯಾದ ಕನಸುಗಳು
  ಹಾಡು ಹಾಡುವುದಿಲ್ಲ..ಈ ಸಾಲುಗಳು ಬಹಳ ಹಿಡಿಸಿದವು. ನಿಜವಲ್ಲವೇ…ಕನಸುಗಳು ಹಾಡು ಹಾಡುವುದಿಲ್ಲ. ಹೀಗೇ ಬರೆಯುತ್ತಿರಿ..ನಾವು ಬರುತ್ತಾ ಇರುತ್ತೇವೆ.
  ನಾವಡ

 10. Rajani ಹೇಳುತ್ತಾರೆ:

  Tumba chennagide kavite, ede modal baari nimma blog nodtirodu, tumba khushi aytu.

 11. ವೈಶಾಲಿ ಹೇಳುತ್ತಾರೆ:

  ಶ್ರೀದೇವಿ,
  thaaaaaaaaaaaaaaaaaaanks! 🙂

  ನಾವಡರೆ,
  ತುಂಬ ದಿನಗಳ ನಂತರ ಭೇಟಿ ಕೊಡ್ತಿದ್ದೀರಿ! ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನೀವಂದಿದ್ದಕ್ಕೆ ಇಲ್ಲ ಅನ್ನೋಕಾಗುತ್ತಾ? ಖಂಡಿತಾ ಬರೀತೀನಿ. ಆಗಾಗ ಬರ್ತಿರಿ.
  ಪ್ರೀತಿಯಿರಲಿ

  ರಜನಿ,
  ಧನ್ಯವಾದ. ನೀವು ಬಂದಿದ್ದು ನಂಗೂ ಖುಷಿಯಾಯ್ತು. ಬರ್ತಾ ಇರಿ.
  ಪ್ರೀತಿಯಿರಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s