ಒಂದು ಹನಿ ವಿಷಾದ…

window3d1

ಕವಿದ ಮೋಡ, ತೆರೆಯೆಳೆದುಕೊಂಡ ಸೂರ್ಯ
ಒದ್ದೆ ರಸ್ತೆ, ಕಾಲಿಲ್ಲದ ಹುಡುಗಿ…
ಕಿಟಕಿಯಾಚೆಗಿನ ಚಿತ್ರ …
ಚೌಕಟ್ಟಿನೀಚೆಗೂ ಹೊಸದೇನಿಲ್ಲ
ಮತ್ತದೇ ಸಂಜೆ… ಮತ್ತದೇ ಬೇಸರ…..

Advertisements

12 thoughts on “ಒಂದು ಹನಿ ವಿಷಾದ…

 1. chetana chaitanya ಹೇಳುತ್ತಾರೆ:

  NijakkU vishAda…
  hani. chennAgide

 2. neelanjala ಹೇಳುತ್ತಾರೆ:

  ನನ್ನಿಂದ ತಮಗೆ ಒಂದು ಆಪ್ತ ಮುಗುಳುನಗೆ
  ಮತ್ತದೇ ಬೇಸರ ಕಳೆಯಲು
  😉

 3. Kallare ಹೇಳುತ್ತಾರೆ:

  ಫಿರ್ ವೋಹಿ ಶಾಮ್.. ವೋಹಿ ಘಮ್ ವೋಹಿ ತನಹಾಯಿ ಹೈ…. ಹಾಡು ನೆನಪಾಯ್ತು. ಕೊನ ಸಾಲು ಓದ್ತಾ ಓದ್ತಾ. ಕನ್ನಡದ್ದೂ ಒಂದು ಹಾಡಿದ್ದು – ಮತ್ತದೇ ಸಂಜೆ ಅದೇ ನೆನೆಪು….
  ಏನು ಭಾಳ ಚಿಕ್ಕದಾತಲಾ ಬರಹ??

 4. ಸುನಾಥ ಹೇಳುತ್ತಾರೆ:

  ಇಷ್ಟೆಲ್ಲಾ ಬೇಸರದ ನಡುವೆಯೂ ಖುಶಿಯ ಸಂಗತಿ: “ಮನದಲ್ಲೊಂದು ಕವನವಿದೆ.”

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  mattade besara… ade sanje ekaantha haadu nenapaaythu

 6. prakash hegde ಹೇಳುತ್ತಾರೆ:

  ಚಂದದ ಕವನ…
  ಮುದ್ದಾದ ಫೋಟೊ..ಒಂದಕ್ಕೊಂದು ಪೂರಕ..
  “ಮನಸೂರೆಗೊಂಡಿತು”..ಎನ್ನುವ ಶಬ್ಧ ಇಲ್ಲಿ ಧಾರಾಳವಾಗಿ ಬಳಸಬಹುದು..
  ಅಭಿನಂದನೆಗಳು..

 7. ರಂಜಿತ್ ಹೇಳುತ್ತಾರೆ:

  ಹನಿ ಬಹಳ ಚೆನ್ನಾಗಿದೆ.

  ಆದ್ರೆ ಇನ್ನು ಸ್ವಲ್ಪ ಹೊತ್ತು ಕಾದಿದ್ರೆ ಮೊದಲಮಳೆಯಂಥ ಕವಿತೆ ಹುಟ್ಟುತ್ತಿತ್ತೇನೋ ಅಲ್ವಾ ಮೇಡಂ?

 8. ವೈಶಾಲಿ ಹೇಳುತ್ತಾರೆ:

  ಥ್ಯಾಂಕ್ಸ್ ಚೇತನಾ……. ಅದು ಯಾವುದೊ ವಿಷಾದ ಭಾವದ ಕ್ಷಣದಲ್ಲೇ ಮೂಡಿಬಂದ ಸಾಲು. ಅದಕ್ಕೆ ಮನಸು ತಟ್ಟಿರಬೇಕು…

  ಧನ್ಯವಾದ ನೀಲಾಂಜಲಾ.. ಇಷ್ಟು ಪ್ರೀತಿ ಕೊಟ್ಟರೆ ಬೇಕಾದಷ್ಟಾಯಿತು 🙂

  @ ಕಲ್ಲಾರೆ,
  ಹೌದು… ಆದ್ರೆ ಬರಹ ಚಿಕ್ಕದಾದರು ಭಾವ ದೊಡ್ಡದಿತ್ತು…. 😦

  ಅದೂ ನಿಜ ಸುನಾಥ್ ಅವ್ರೆ 🙂

  @ ವಿಜಯರಾಜ್,
  ನನಗೂ ಕೂಡ ಬರೆವಾಗ ಆ ಹಾಡು ನೆನಪಾಗಿತ್ತು…

  ಪ್ರಕಾಶ್ ಅವರೇ,
  ಬ್ಲಾಗ್ ಗೆ ಸ್ವಾಗತ. ಖುಷಿಯಾಯ್ತು ನೀವು ನನ್ನ ಬರಹಗಳನ್ನ ಮೆಚ್ಚಿಕೊಂಡಿದ್ದು. ಬರ್ತಾ ಇರಿ.

  ರಂಜಿತ್, ಕಾಯೋ ಅಷ್ಟು ಟೈಮ್ ಇರ್ಲಿಲ್ಲ 🙂

  ವಿಕಾಸ್, ಬಾಲ್ಕನಿಗೆ ಸ್ವಾಗತ! ಖುಷಿಯಾಗೊಯ್ತು!
  ಹ್ಮ್ಮ್……..ಅದು ಕಿಟಕಿಯಾಚೆ ಕಂಡಿದ್ದು.

 9. shivuu.k ಹೇಳುತ್ತಾರೆ:

  ಮುದ್ದಾದ ಹನಿಗವನ ಅದಕ್ಕೆ ತಕ್ಕಂತ ಪೋಟೊ. ಒಂದು ಹನಿ ವಿಷಾದ ಪದಗಳು ಇಷ್ಟವಾಯ್ತು.

 10. ಶೆಟ್ಟರು (Shettaru) ಹೇಳುತ್ತಾರೆ:

  ಈ ಮೌನ, ಒಂಟಿತನ
  ಮತ್ತೇ ಅದೇ ಬೇಸರ
  ಎಕೋ ಇಷ್ಟವಾಗುತಿದೆ
  ಬದುಕಿದು ಎಂಥ ಸೋಜಿಗ…

 11. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಮನಮುಟ್ಟುವಂತ ಹನಿಗವನ. ಚಿತ್ರ ಕವನ ಎರಡೂ ಒಂದಕ್ಕೊಂದು ಪೂರಕವಾಗಿದೆ. “ಚೌಕಟ್ಟಿನೀಚೆಗೂ ಹೊಸದೇನಿಲ್ಲ” ಸಾಲು ಯಾಕೋ ತುಂಬ ಇಷ್ಟ ಆಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s