ಕಾಫಿಯಲ್ಲಿ ಕೆನೆ ಹೆಚ್ಚಾಗಿದೆ!

ಬಾಲ್ಕನಿ ಬೇಸರದಲ್ಲಿದೆ….. ನಾನು ಖುಷಿಯಾಗಿದ್ದೇನೆ! ನನ್ನ ಬಾಲ್ಕನಿಯ ಜಾಗ ಇನ್ನು ನಾಲ್ಕೇ ನಾಲ್ಕು ದಿನಗಳಲ್ಲಿ ಬದಲಾಗಲಿದೆ!!

ಇನ್ನು ಮೇಲೆ ಛಳಿಯಲ್ಲಿ ಗಡ ಗಡ ನಡುಗುತ್ತ ಬ್ಲಾಗಿಸುವ ರಗಳೆಯಿಲ್ಲ. ಬೆಂಗಳೂರಿನ ಬಾಲ್ಕನಿಯಲ್ಲಿ ಬೆಚ್ಚಗೆ ಕೂತು ಹಿಮದ ಚಿತ್ರ ನೋಡಬಹುದು! ಆಗಾಗ ಬ್ಲಾಗಿಗರ ಭೇಟಿಯಲ್ಲಿ ಇಣುಕಬಹುದು. ಬರೆಯಲು ಬೋರಾದರೆ ಸದ್ದಿಲ್ಲದೆ ಹಳೆಯದೊಂದು ಕವಿತೆಯನ್ನೋ ಹರಟೆಯನ್ನೋ ಎತ್ತಿ ಹಾಕಬಹುದು… ಎಲ್ಲಕ್ಕೂ ಹೆಚ್ಚಾಗಿ ನನ್ನೂರಲ್ಲೇ ಕುಳಿತು ಕನುಸುಗಳ ನಡುವಲ್ಲಿ ಕಳೆದು ಹೋಗಬಹುದು.. … ಆಹ್!

ಅಷ್ಟಕ್ಕೂ ಊರಿಗೆ ಬರ್ತೀನೆಂಬ ನೆಪ ಇಟ್ಟುಕೊಂಡು ಬ್ಲಾಗ್ ನೆಡೆ ತಲೆ ಹಾಕದೆ ಕೂತಿದ್ದು ಸರಿಯಾದ ಕಾರಣ ಅಲ್ಲ ಅಂತ ಕೂಡ ಹೇಳಿಬಿಡುತ್ತೇನೆ. ಆ ಕಡೆ ಪಬ್ಬು, ಈ ಕಡೆ ಪ್ರೇಮಿಗಳು.. ಮಧ್ಯೆ ಒಬ್ಬ ವಿಲನ್ನು(!)…. ಅವರನ್ನೆಲ್ಲ ನೆಪವಾಗಿಟ್ಟುಕೊಂಡು ಬ್ಲಾಗನಲ್ಲೇ ಬಡಿದಾಡಿಕೊಳ್ಳುವ ಬ್ಲಾಗಿಗರು.. ಎಲ್ಲ ಓದಿಕೊಳ್ಳುತ್ತ ನಾನು ಆರಾಮಾಗಿದ್ದೆ 🙂 ಇದರ ಮಧ್ಯೆ ಸಂಬಂಧ ಪಡದಿದ್ರೂ ತಲೆ ಬಿಸಿ ಮಾಡಿಕೊಂಡಿರಲು ನ್ಯಾಶನಲ್ಲೂ, ಇಂಟರನ್ಯಾಶನಲ್ಲು ವಿಷಯಗಳೆಲ್ಲ ಇದ್ದವು! ಒಟ್ಟಿನಲ್ಲಿ ನಾನು, ನನ್ನ ಬಾಲ್ಕನಿ ಇಬ್ಬರೂ ಖುಷಿಯಾಗಿದ್ದೆವು. ಈಗ ಖುಷಿ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ,

ಕಪ್ಪಿನಲ್ಲಿ ತುಂಬಿಸಿದ್ದೇನೆ ಕಾಫಿ
ಮಾಡಬೇಕಿದೆ ಕರುಣೆಯುಳ್ಳ ಓದುಗರು ಮಾಫಿ!

🙂 🙂 🙂

Advertisements

8 thoughts on “ಕಾಫಿಯಲ್ಲಿ ಕೆನೆ ಹೆಚ್ಚಾಗಿದೆ!

  1. shivu.k ಹೇಳುತ್ತಾರೆ:

    ವೈಶಾಲಿ ಮೇಡಮ್,

    ನೀವಂತೂ ಭಾಲ್ಕನಿ ಬದಲಿಸಿ ಖುಷಿಯಲ್ಲಿದ್ದೀರಿ….ಅದ್ರೆ ನಾನು ನಾಳೆ ನನ್ನ ಬಾಲ್ಕನಿ ಬದಲಿಸಲಿದ್ದೇನೆ… ನನ್ನ ಈ ಬಾಲ್ಕನಿಯಲ್ಲಿ ಕಳೆದ ಮೂರುವರೆ ವರ್ಷಗಳ ನೆನಪು ಕಾಡುತ್ತಿದೆ…ಹೊಸ ಮನೆಯಲ್ಲಿ ಈ ರೀತಿಯ ಬಾಲ್ಕನಿ ಇಲ್ಲದ್ದರಿಂದ ನನಗೆ ಒಂದು ರೀತಿಯ ಬೇಸರವಾಗಿದೆ…ಇದರ ಬಗ್ಗೆ ಬರೆಯುತ್ತಿದ್ದೇನೆ…
    ಓಕೆ ಅಂತೂ ಹುಟ್ಟೂರಿಗೆ ಬಂದಿರಲ್ಲ….ಸ್ವಾಗತ….

  2. Rajesh Manjunath ಹೇಳುತ್ತಾರೆ:

    ಖುಷಿಯಾಯ್ತು ಮತ್ತೆ ಬಂದಿರಲ್ಲ… 🙂

  3. ಮಲ್ಲಿಕಾರ್ಜುನ.ಡಿ.ಜಿ. ಹೇಳುತ್ತಾರೆ:

    ಮೇಡಂ, ನಿಮಗೆ ಸ್ವಾಗತ. ಬೆಂಗಳೂರಿನಲ್ಲಿ ಕಾಫಿ ಸೇವಿಸುತ್ತಾ ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ. ನಿಮ್ಮ ಅಭಿಪ್ರಾಯ ತಿಳಿಸಿ.
    http://dgmalliphotos.blogspot.com/

  4. prakash hegde ಹೇಳುತ್ತಾರೆ:

    ವೈಶಾಲಿ…

    ಬನ್ನಿ.. ಬನ್ನಿ..

    ಬೆಂಗಳೂರಿಗೆ..

    ಇಲ್ಲಿ ಸ್ಪೆಶಲ್ ಆಗಿ ಜಾಮ್ ಸಿಗುತ್ತದೆ..

    ಚೆನ್ನಾಗಿ “ಎಂಜಾಯ್” ಮಾಡಬಹುದು..

    ಅದೂ ಫ್ರೀಯಾಗಿ…

    “ಪ್ರಕಾಶಣ್ಣ ಕೊಡಸ್ತಾನೆ ಅಂದುಕೊಂಡ್ರಾ..?

    ಅದು..

    “ಟ್ರಾಫಿಕ್ ಜಾಮು..”..!

    ಬರ್ತಿರೋದು ಖುಷಿಯಾಯ್ತು…

    ಸ್ವಾಗತ..

  5. kallare ಹೇಳುತ್ತಾರೆ:

    ಕಾಫಿ ಮಗ್ ಕೈಗೆ ನನ್ನ ಕೈಗೆ ಬಂದ್ರಷ್ಟೇ ಚೆನ್ನಾಗಿರುತ್ತೆ… ಇಲ್ಲಾಂದ್ರೆ ಹೊಸಾ ಬಾಲ್ಕನಿಗೇ ಬಂದು ಜಗಳ ಮಾಡ್ತೀನಿ ಕೆನೆ ಕಾಫಿ ಮೇಡಮ್ಮೂ… 🙂

  6. mahesh ಹೇಳುತ್ತಾರೆ:

    ಬೆಂಗಳೂರಿಗೆ ಸ್ವಾಗತ.

  7. ರಂಜಿತ್ ಹೇಳುತ್ತಾರೆ:

    ಓಹ್!!

    ಸ್ವಾಗತ..:)

    ಶಿವರಾತ್ರಿಯೊಳಗೆ ತುಂಬಿಸದಿದ್ದರೂ,ತುಂಬಿಸುವ ಭರವಸೆಯಿಂದಾಗಿ ಮಾಫಿಯನ್ನು ಮನ್ನಾ ಮಾಡಲಾಗಿದೆ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s