ಕವಿತೆಯಾಗದ ಹನಿಗಳು…..

ಮೊನ್ನೆ ಕಂಡ ಚಂದ್ರಮ
ನಿನ್ನೆಯೂ ಇದ್ದ
ಜೊತೆಗದೇ ಬೆಳದಿಂಗಳಲ್ಲಿ ಅದೆಷ್ಟು ತಾರೆ
ಎಲ್ಲವೂ ಹಳತು ನಿನ್ನೆಯವರೆಗೆ
ಇಂದೇಕೋ ಹೊಸಬಗೆ
ಕಾರಣ ಹೇಳಲೇ ಬೇಕೇನು?
ಅದು ನೀನು!

+-+-+-+-+-+-+-+-+-+-+-+-+-+-+-+-+-+

ದಟ್ಟ ಇಬ್ಬನಿಯ ಬೆಳಗಲ್ಲಿ
ಪುಟ್ಟದೊಂದು ಕನಸು
ಕನವರಿಕೆಯೊಂದು ಅರ್ಥವಾಗದ ಗುಟ್ಟು
ಸಧ್ಯ! ಕೇಳಿಸಲಿಲ್ಲ ಯಾರಿಗೂ
ಅದು ನಿನ್ನದೇ ಹೆಸರು!!

+-+-+-+-+-+-+-+-+-+-+-+-+-+-+-+-+-+

ನಿನ್ನ ನೆನಪಿನ ಚಾದರ ಹೊದ್ದು ಮಲಗಿದ್ದೇನೆ
ಕತ್ತಲ ರಾತ್ರಿಗಳಲ್ಲಿ ನೀನೆ ಬೆಳಕು
ಮುಂಜಾವಿಗೆ ಮುನ್ನ ಒಮ್ಮೆ ಕನಸಾಗಿ ಬಂದುಬಿಡು
ಬೆಳಗಾಗಿಬಿಟ್ಟರೆ ಉದಯಿಸುವ ರವಿ ಕನಸ ಕದ್ದುಬಿಟ್ಟಾನು!

+-+-+-+-+-+-+-+-+-+-+-+-+-+-+-+-+-+

ಸುಮ್ಮನೆ ಕಳೆದು ಹೋಗುತ್ತವೆ ಹಗಲುಗಳು
ಮತ್ತೆ ದಟ್ಟ ಕತ್ತಲಿನ ರಾತ್ರಿಗಳು
ನಿನ್ನ ನೆನಪುಗಳ ನಡುವೆ
ದಿನಗಳ ಲೆಕ್ಕವೂ ಮರೆತಿದೆ
ಕನಸ ಎಣಿಸ ಕುಳಿತರೆ
ರಾತ್ರಿಯೆಲ್ಲಾ ಹಗಲು………..!

Advertisements

10 thoughts on “ಕವಿತೆಯಾಗದ ಹನಿಗಳು…..

 1. Rajesh Manjunath ಹೇಳುತ್ತಾರೆ:

  ವೈಶಾಲಿಯವರೇ,

  ಮುದ್ದಾದ ಸಾಲುಗಳನ್ನು ಪೋಣಿಸಿದ್ದೀರಿ…

  “ದಟ್ಟ ಇಬ್ಬನಿಯ ಬೆಳಗಲ್ಲಿ
  ಪುಟ್ಟದೊಂದು ಕನಸು
  ಕನವರಿಕೆಯೊಂದು ಅರ್ಥವಾಗದ ಗುಟ್ಟು
  ಸಧ್ಯ! ಕೇಳಿಸಲಿಲ್ಲ ಯಾರಿಗೂ
  ಅದು ನಿನ್ನದೇ ಹೆಸರು!!”

  ಈ ನಾಲ್ಕು ಸಾಲುಗಳು ತುಂಬಾ ತುಂಬಾ ಇಷ್ಟವಾದವು…

 2. ರಂಜಿತ್ ಹೇಳುತ್ತಾರೆ:

  ವೈಶಾಲಿ ಮೇಡಮ್,

  ಪರಿಚಯವಿರುವವರ ಬ್ಲಾಗಿನಲ್ಲಿ ಹೊಗಳಿ ಕಾಮೆಂಟ್ ಬರೆವುದಕ್ಕೆ ಬಹಳ ಮುಜುಗರವಾಗುತ್ತೆ. ಬೇರೆಯವರು ಹೊಗಳಿದರೆ ನಮಗೇ ಹೊಗಳಿಕೆ ದಕ್ಕಂತೆ ಅನ್ನಿಸಿ ತುಂಬಾ ಖುಷಿ ಸಿಗುತ್ತದೆ.
  ತುಂಬಾ ಚೆನ್ನಾಗಿದ್ದರೆ ಹೀಗೆ ಕಾಮೆಂಟ್ ಮಾಡದೇ ಹೋದರೆ ನಮ್ಮ ಮೇಲೆ ನಮಗೇ ಬೇಸರವಾಗುವುದು ಖರೆ.

  ಎಲ್ಲಾ ಹನಿಯೂ ಬಹಳ ಚೆಂದವಿದೆ. ಊರಿಗೆ ಬಂದೊಡನೆ ನಮಗೆಲ್ಲಾ ಅದ್ಭುತ ಬರಹ ಕೊಟ್ಟಿದ್ದೀರಿ.

  ಥ್ಯಾಂಕ್ಸ್!

 3. minchulli ಹೇಳುತ್ತಾರೆ:

  ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 4. shivu.k ಹೇಳುತ್ತಾರೆ:

  ವೈಶಾಲಿ ಮೇಡಮ್,

  ಕವನ ತುಂಬಾ ಚೆನ್ನಾಗಿದೆ….ರೋಮ್ಯಾಂಟಿಕ್ ಮೂಡ್ ಇದೆ….

  ಮುಂಜಾವಿಗೆ ಮುನ್ನ ಒಮ್ಮೆ ಕನಸಾಗಿ ಬಂದುಬಿಡು
  ಬೆಳಗಾಗಿಬಿಟ್ಟರೆ ಉದಯಿಸುವ ರವಿ ಕನಸ ಕದ್ದುಬಿಟ್ಟಾನು!

  ಇವೆರಡೂ ಸಾಲುಗಳು ತುಂಬಾ ಚೆನ್ನಾಗಿವೆ…..

  ಆಹಾಂ! ನಾಳೆ ಮರೆಯದೇ ನನ್ನ ಬ್ಲಾಗಿಗೆ ಬನ್ನಿ….ಹೊಸ ಭೂಪಟಗಳು ಬರಲಿವೆ…ಥ್ಯಾಂಕ್ಸ್…

 5. PRAKASH HEGDE ಹೇಳುತ್ತಾರೆ:

  ವೈಶಾಲಿ…

  ಎಲ್ಲವೂ ಅತ್ಯುತ್ತಮ..
  ಕವನಗಳು…

  ಮನಸ್ಸಿಲ್ಲಿ ಉಳಿಯುವಂಥದ್ದು…

  ಓದಿ ತುಂಬಾ ಖುಷಿಯಾಯಿತು…

  ಅಭಿನಂದನೆಗಳು…

 6. shreedevi kalasad ಹೇಳುತ್ತಾರೆ:

  ಹಸಿರ ಸೆರಗಿನ ಮೇಲೆ ಲ್ಯಾವೆಂಡರ್‌ ಚಿತ್ತಾರ ಚೆಲ್ಲಿಕೊಂಡ ಫೋಟೋ ಇಷ್ಟವಾಯ್ತು. ಹಾಗೇ ಆ ಎರಡೂ ಕವನಗಳು…

 7. venu ಹೇಳುತ್ತಾರೆ:

  ಅಬ್ಬಬ್ಬಾ….!
  ಒಂದಕ್ಕಿಂತ ಒಂದು ಚೆನ್ನು…ನಾನು ಫ್ಲಾಟು 🙂

 8. ವೈಶಾಲಿ ಹೇಳುತ್ತಾರೆ:

  ರಾಜೇಶ್,
  ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮಗೆ ಖುಷಿಯಾದ್ದಕ್ಕೆ ನಂಗೂ ಖುಷಿ 🙂

  ರಂಜಿತ್,
  ಹೊಗಳಿಕೆ ಕೇಳಿ ಅಟ್ಟ ಹತ್ತಿಯಾಗಿದೆ! 😉

  ಶಿವೂ,
  ಏನೋ .. ತೋಚಿದ್ದು ಗೀಚ್ತೀನಿ. ನೀವೆಲ್ಲ ಇಷ್ಟಪಡ್ತೀರಿ ಅಂದ್ರೆ ನನ್ನ ಸಾಲುಗಳು ಧನ್ಯ!

  ಪ್ರಕಾಶಣ್ಣ,
  ನೀನು ಚೆನ್ನಾಗಿಲ್ಲ ಅಂದಿದ್ದಾದ್ರೂ ಯಾವಾಗ?? ಆದರೂ ಥ್ಯಾಂಕ್ಸು 🙂

  ಶ್ರೀದೇವಿ,
  ಧನ್ಯೋಸ್ಮಿ!

  ವೇಣು,
  ನೆಲದಿಂದ ಎರಡಡಿ ಮೇಲಿದೀನಿ 😉

  ಕಲ್ಲಾರೆ,
  ಖುಷಿಯಾಗಿ ನಕ್ಕಿದ್ದಾ ಅಥ್ವಾ……………

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s