ಮರೆತ ಮನಸಿನಲೆಗಳು

ಒಂದು –

ಸುರಿವ ಜಡಿಮಳೆ ಭುವಿಯ ಒಡಲೊಳಗಿಲಿಳಿದು
ನಡೆದಂತೆ ನಿನ್ನ ಪ್ರೀತಿ
ಇಳಿದ ನೀರೆಲ್ಲ ಒಳಗೆ ಗುಪ್ತಗಾಮಿನಿ

ನನ್ನೊಳಗೆ ನಿನ್ನ ನೆನಪಂತೆ ಒಲವಂತೆ
ಊರೆಲ್ಲ ಹರಿದು ಬಳುಕಿ ಬಾಗಿ
ಧುಮುಕುವುದು ಮಾತು ಮಾತ್ರ
ಉಳಿದುದೆಲ್ಲ ಎದೆಯೊಳಗಿನ ಒರತೆ

ದಾಹ ತೀರಿಸಿ ತೋಯಿಸಿ
ಮಿಂದು ನೆಂದು ಹೋದ ಇಳೆಯ
ಒಳಗಿಂದ ಮತ್ತೆ ಜಿನುಗುವ ನೀರು
ಎದೆಯೊಳಗೆ ಹರಿದ ಪ್ರೀತಿ
ನಗುವಾಗಿ ಖುಷಿಯಾಗಿ ಹಾಡಾಗಿ ಜಿನುಗಿದ ಹಾಗೆ…

ಮತ್ತೊಂದು –

ಮಿಂದ ತಲೆಗೂದಲಿಂದ ತೊಟ್ಟಿಕ್ಕುವ ನೀರ ಹನಿ
ನೆಲ ಸೇರುವ ಮುನ್ನ ನಕ್ಕಿತ್ತು
ನೆತ್ತಿಯಿಂದಿಳಿದು ಮೈ ಮನವನ್ನೆಲ್ಲ
ಹಗುರಾಗಿಸಿ ಹರಿದಿದ್ದೇನೆ
ಭಾರ ತೊಳೆದುಹೋಗಿದೆ……

ಎಳೆಬಿಸಿಲ ನಡುವಲ್ಲಿ ಹರಡಿದ
ಹೊರೆಗೂದಲು
ಕ್ಷಣದಲ್ಲಿ ನೀರಹನಿ ನಾಪತ್ತೆ
ಹಾರುವ ಮುಂಗುರುಳು
ಕೂದಲ ತುಂಬೆಲ್ಲ ಸಿಕ್ಕುಗಳು
ನಡುವಿಂದ ತೊಟ್ಟಿಕ್ಕುವ ನೆನಪುಗಳು
ಒದ್ದೆ ನೆನಪುಗಳ ಇನ್ನು ಒಣಗಿಸುವುದೆಲ್ಲಿ……………..

Advertisements

One thought on “ಮರೆತ ಮನಸಿನಲೆಗಳು

  1. Beluru Sudarshana ಹೇಳುತ್ತಾರೆ:

    Dear Vaishali
    read your blog today. You are expressing!! That is a good thing. Your observations on my website is welltaken. I have similar response from many others. But the journalist inside me makes me to write like that. I hope you understand.
    please write me a response so that we will be in touch, so that good knowledge is shared and experienced.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s