ಟೈಮ್ ಪಾಸ್ !

ಜಡಿಮಳೆಯ ನಡುವಲ್ಲಿ
ಸುರಿಯುತ್ತವೆ ನಿನ್ನ ನೆನಪುಗಳ ಆಲಿಕಲ್ಲು
ಹೆಕ್ಕಿ ತಂದು ಬೊಗಸೆಯಲ್ಲಿ ಹಿಡಿವಷ್ಟರಲ್ಲಿ ಕರಗಿ ನೀರು
ಮನದೊಳಗೆ ಹಗಲೂ ಮುಸ್ಸಂಜೆ
ಎದೆಯೊಳಗಿಳಿದು ತಂತಿ ಮೀಟುವ ಮಳೆಯೇ
ನೀ ಸುರಿವುದೇ ಬೇಡ, ಬೇಸಿಗೆಯೇ ಇರಲಿ

ಕಣ್ಣಲ್ಲಿಯೇ ಕರಕಲಾಗುತ್ತಿವೆ ಕನಸುಗಳು
ಕಾದಷ್ಟೂ ಕಾಯಿಸುತ್ತಿದೆ
ಉರಿಬಿಸಿಲ ಧಗೆಗೆ ಮುರುಟುತ್ತಿವೆ
ಮನದ ಮಾತುಗಳು
ಆಸೆಗಳನ್ನೆಲ್ಲ ಆವಿಯಾಗಿಸುವ ಬಿಸಿಲೇ
ನೀ ತಟ್ಟುವುದೇ ಬೇಡ, ಚಳಿಗಾಲವೇ ಇರಲಿ

ನಿಂತಲ್ಲಿ ಕುಂತಲ್ಲಿ ಹಿಡಿಯಾಗುವ ದೇಹ
ಬೆಚ್ಚನೆ ಗೂಡು ಬಯಸಿ
ಬಿಸಿಯುಸಿರಲ್ಲಿ ಬೆರೆತು ಬೆರಗಾಗುವ
ಕನಸು ಕಂಡು
ಮತ್ತಿಷ್ಟೇ ಇಷ್ಟು ಭಾರವಾಗುವ ಹೊತ್ತು
ಬಾಡಿದ ಮರವ ಇನ್ನಷ್ಟು ಬೆತ್ತಲಾಗಿಸುವ
ಚಳಿಗಾಲವೇ ನೀ ಸುಳಿವುದೇ ಬೇಡ

ಮಳೆಗಾಲವೇ  ಇರಲಿ!!

Advertisements

12 thoughts on “ಟೈಮ್ ಪಾಸ್ !

 1. Rajesh Manjunath ಹೇಳುತ್ತಾರೆ:

  ವೈಶಾಲಿ ಮೇಡಂ,
  ಸುಂದರ ಕವನ ಹಂದರ… ತುಂಬಾನೇ ಇಷ್ಟವಾಯಿತು :).
  “ಕಣ್ಣಲ್ಲಿಯೇ ಕರಕಲಾಗುತ್ತಿವೆ ಕನಸುಗಳು
  ಕಾದಷ್ಟೂ ಕಾಯಿಸುತ್ತಿದೆ
  ಉರಿಬಿಸಿಲ ಧಗೆಗೆ ಮುರುಟುತ್ತಿವೆ
  ಮನದ ಮಾತುಗಳು
  ಆಸೆಗಳನ್ನೆಲ್ಲ ಆವಿಯಾಗಿಸುವ ಬಿಸಿಲೇ
  ನೀ ತಟ್ಟುವುದೇ ಬೇಡ, ಚಳಿಗಾಲವೇ ಇರಲಿ”
  ಈ ಆರು ಸಾಲುಗಳು ನನ್ನ ಅಚ್ಚುಮೆಚ್ಚು 😉 ….

 2. santhosh ಹೇಳುತ್ತಾರೆ:

  “ಮನದೊಳಗೆ ಹಗಲೂ ಮುಸ್ಸಂಜೆ..”… excellent….keep rocking…
  — Santhosh Ananthapura

 3. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಬಹಳ ದಿನದ ನಂತರ ಬರೆದಿದ್ದೀರ… ತುಂಬಾ ಚಂದವಾಗಿದೆ ಕವಿತೆ..
  “ಜಡಿಮಳೆಯ ನಡುವಲ್ಲಿ
  ಸುರಿಯುತ್ತವೆ ನಿನ್ನ ನೆನಪುಗಳ ಆಲಿಕಲ್ಲು
  ಹೆಕ್ಕಿ ತಂದು ಬೊಗಸೆಯಲ್ಲಿ ಹಿಡಿವಷ್ಟರಲ್ಲಿ ಕರಗಿ ನೀರು” ಈ ಸಾಲುಗಳು ತುಂಬಾ ಇಷ್ಟವಾಯಿತು.. 🙂

  ಶರಶ್ಚಂದ್ರ ಕಲ್ಮನೆ

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  simply superb…!!

 5. kallare ಹೇಳುತ್ತಾರೆ:

  masth masth….. Mattishtu bareerala

 6. shama ಹೇಳುತ್ತಾರೆ:

  ತುಬಾ ಚಂದದ ಕವನ.. ಭಾವದ ಮಿಡಿತ ಮನ ಮುಟ್ಟುತ್ತದೆ

  ವೈಶಾಲಿ ತಪ್ಪದೆ ಚಿತ್ರೋತ್ಸವಕ್ಕೆ ಬನ್ನಿ ಮತ್ತೆ .. ನೀವು ಬಂದ್ರೆ ನಮಗೆಲ್ಲ ಕೆನೆ ಕಾಫಿ ಸಿಗಬಹುದೆಂಬ ಆಸೆಗೆ ಕರೆಯುತ್ತಿದ್ದೇನೆ.

  ಶುಭವಾಗಲಿ,
  ಶಮ, ನಂದಿಬೆಟ್ಟ

 7. Poornima Bhat, Sannakeri ಹೇಳುತ್ತಾರೆ:

  ಚೆಂದನೆಯ ಭಾವ… 🙂

 8. venu ಹೇಳುತ್ತಾರೆ:

  ವೈಶಾಲಿಯವರೇ
  ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್ಟರ ಭಾವಗಾನ ಶೈಲಿಯನ್ನೆಲ್ಲಾ ಅರೆದು ಕುಡಿದಂತಿದೆ…ಒಳ್ಳೆಯ ಗೀತೆ….

 9. ವೈಶಾಲಿ ಹೇಳುತ್ತಾರೆ:

  ರಾಜೇಶ್,
  ಥ್ಯಾಂಕ್ಸ್ 🙂

  ಸಂತೋಷ್,
  🙂

  ಶರಶ್ಚಂದ್ರ ಕಲ್ಮನೆ,
  ನಂಗೂ ಖುಷಿ ಖುಷಿ! ನೀವು ಮೆಚ್ಚಿಕೊಂಡಿದ್ದಕ್ಕೆ 🙂

  ಶಮಾ,
  ಧನ್ಯವಾದಗಳು.

  ವಿಜಯ ರಾಜ್,

  ತುಂಬಾ ದಿನದ ನಂತರ ಬಂದ್ರಿ ಆಲ್ವಾ? ಥ್ಯಾಂಕ್ಸ್ ರೀ 🙂

  ಪೂರ್ಣಿಮಾ,
  thaanksuuuuuuu……………

  ವೇಣು,
  ಇದ್ಯಾಕೋ ಅತಿಯಾಯ್ತು! ಈಗಲೇ ಕಾಲು ನೆಲ ಮುಟ್ತಿಲ್ಲ! 😀

 10. shivu.k ಹೇಳುತ್ತಾರೆ:

  ಮೇಡಮ್,

  ಸುಂದರವಾದ ಕವಿತೆ…ಮನಮುಟ್ಟುತ್ತವೆ…

  ಕಣ್ಣಲ್ಲಿಯೇ ಕರಕಲಾಗುತ್ತಿವೆ ಕನಸುಗಳು
  ಕಾದಷ್ಟೂ ಕಾಯಿಸುತ್ತಿದೆ
  ಉರಿಬಿಸಿಲ ಧಗೆಗೆ ಮುರುಟುತ್ತಿವೆ
  ಮನದ ಮಾತುಗಳು
  ಆಸೆಗಳನ್ನೆಲ್ಲ ಆವಿಯಾಗಿಸುವ ಬಿಸಿಲೇ
  ನೀ ತಟ್ಟುವುದೇ ಬೇಡ, ಚಳಿಗಾಲವೇ ಇರಲಿ

  ಇಷ್ಟವಾಗುತ್ತದೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s