ಐ ಮಿಸ್ ಯು !

                                                              at-the-balcony-pino-daeni

 ಬಾಲ್ಕನಿ ತುಂಬಾ ದಿನಗಳಿಂದ ಖಾಲಿ ಖಾಲಿ. ಮನಸ್ಸು ಕೂಡ. ಕೊರೆವ ಚಳಿಯ ದೇಶದಿಂದ ಮರಳಿ ಬೆಂಗಳೂರಿನ ಬಿಸಿಗೆ ಬಿದ್ದಾಗಿದೆ. ರಸ್ತೆಯ ತಿರುವಿನಲ್ಲಿ ನಿಂತು ನೋಡಿದರೆ ದಾರಿ ತುಂಬ ದೂರ. ತಿರುಗಿ ಕಣ್ಣಾಡಿಸಿದರೆ ಇಟ್ಟ ಹೆಜ್ಜೆಗಳ ಗುರುತೇ ಇಲ್ಲ… ಕಣ್ಣು ಮುಚ್ಚಿದಾಗ ಕಾಡಿದ್ದು ಕೆಲ ಬಿಂಬಗಳು ಮಾತ್ರ…..

ಶೆಹರ್ ಕಿ ಭೀಡ್ ಮೇ ಗುಮ್ ಹೋಗಯಿ ಸಬ್ ಆವಾಜೇ
ಅಪನೀ ಪಾಯಲ್ ಕಿ ಝಾನಕಾರ್ ಕಂಹಾ ಲಾವೂ
ಕ್ಯಾ ವೋ ದಿನ್ ಥಿ ಕಿ ಖಾಮೋಷಿ ಭಿ ಸಜಾ ದೇತಿ ಥೀ
ಔರ ಮೇ ದರೋ ದೀವಾರ್ ಕಂಹಾ ಲಾವೂ…

ನಾನು ಮೌನವಾದಾಗಲೆಲ್ಲ ಕರೆದು ಕೂರಿಸಿಕೊಂಡಿದ್ದು ಜಗಜಿತ್ ರ ಹಾಡುಗಳು ಮತ್ತು ನನ್ನ ಬಾಲ್ಕನಿ. ಮನದ ಹೆಜ್ಜೆಗಳ ಗುರುತು ಮೂಡಿದ್ದು ಇಲ್ಲಿ ಮಾತ್ರ. ಕಂಡ ಕನಸುಗಳಿಗೆ ಲೆಕ್ಕವಿಟ್ಟಿಲ್ಲ. ಬೇಸರಗಳು ಇಲ್ಲಿಂದ ತಿರುಗಿ ಹೋಗಿದ್ದು ಅಪರೂಪ . ಪ್ರೀತಿಯ ಮಾತು, ಗುಟ್ಟುಗಳೆಲ್ಲ ಇಲ್ಲಿ ಪ್ರತಿದ್ವನಿಯಾಗಿದ್ದಿಲ್ಲ….

  ಬೇಸರದೊಳಗಿನ ಬೇಸರವೆಂದರೆ ನನ್ನ ಹೊಸ ಮನೆಗೆ ಬಾಲ್ಕನಿಯೇ ಇಲ್ಲ. ಎದೆಯೊಳಗಿನ ಭಾರವನ್ನೆಲ್ಲ ಬೇಜಾರಿಲ್ಲದೆ ಬಾಲ್ಕನಿಗೆ ಬಿಸಾಡಿ ಹಗುರಾಗುತ್ತಿದ್ದ ನನ್ನದೀಗ ಬಾಲ್ಕನಿಯಿಲ್ಲದ ಬದುಕು!  ಮಾತುಗಳೆಲ್ಲ ಈಗ ನನ್ನೊಳಗೆ ಅನಾಥವಾಗಿವೆ. ಆನಿಸಿಕೊಳ್ಳುವವರಿಲ್ಲದೆ ಅಲೆದಾಡುತ್ತಿವೆ.   ಮೌನ ಮತ್ತಷ್ಟು ಮೌನವಾಗಿದೆ. ನನ್ನ ಪ್ರೀತಿಯ ಹಾಡುಗಳಿಗೆಲ್ಲ ವೇದಿಕೆಯೇ ಇಲ್ಲ.  ಬಾಲ್ಕನಿಯಿಲ್ಲದೆ, ಬಾಲ್ಕನಿಯೊಳಗಿನ ನಾನಿಲ್ಲದೆ ಜಗಜೀತರ ಗಜ್ಹಲ್ ಗಳೆಲ್ಲ ಹಾಡುಗಳಾಗಿಬಿಟ್ಟಿವೆ!! 

ಸುತ್ತಲೂ ಮರಗಳಿವೆ.  ಅದರೊಟ್ಟಿಗೆ ದಿನವಿಡೀ ಸುಮ್ಮನಿರದ ಕೋಗಿಲೆಗಳಿವೆ.  ನಡೆದು ಹೊರಟರೆ ಬೆಂಗಳೂರು ಬಿಟ್ಟು ಊರಿಗೆ ಬಂದುಬಿಟ್ಟೆನೇನೋ ಅನ್ನಿಸೋ ಹಾಗೆ ದೇವಸ್ಥಾನಗಳು, ಅಗಲಗಲ ರಸ್ತೆಗಳು, ಬೇಕಷ್ಟು ಹಸಿರಿದೆ.  ಚಂದದ ಹುಡುಗರು, ಅವರಿಗಿಂತ ಚಂದ ಚಂದ ಹುಡುಗಿಯರಿದ್ದಾರೆ!  ಕೈ ಚಾಚಿದರೆ ಮಾರಿಗೆ ಮೂರು ಸೂಪರ್ ಮಾರ್ಕೆಟ್ ಗಳು ಕತ್ತರಿ ಹಿಡಕೊಂಡೇ ಕೂತಿವೆ.  ಬೆಂಗಳೂರಂಥ  ಬೆಂಗಳೂರಲ್ಲಿ ಇನ್ನೆಂಥ ಸ್ವರ್ಗ ಸಿಕ್ಕೀತೆ ಹುಡುಗೀ ಅಂತ ನನ್ನ ಹುಡುಗ ದಿನಕ್ಕೆ ಮೂರು ಬಾರಿ ಕಾಡುತ್ತಾನೆ. ಆದರೆ ನಾನು ಮಾತ್ರ ದಿನ ಬೆಳಗಾದರೆ ಬಾಲ್ಕನಿಯಿಲ್ಲದ ಬದುಕೂ ಒಂದು ಬದುಕೇ? ಎಂದೆಲ್ಲ ಸೆಂಟಿ’ಮೆಂಟಲ್’ (!)  ಡೈಲಾಗು ಹೇಳಿಕೊಂಡು ಓಡಾಡುತ್ತಿದ್ದೇನೆ. 😦 ( ಇದು ಸ್ವಲ್ಪ ಜಾಸ್ತಿಯೇ ಆಯ್ತನ್ನಿ, ಪರವಾಗಿಲ್ಲ! )

ಆಪ್ ಜಿನಕೇ ಕರೀಬ್ ಹೋತೇ ಹೇ
ವೋ ಬಡೇ ಖುಷ್ ನಸೀಬ್ ಹೋತೇ ಹೇ ..

ಮುಜ್ ಸೆ ಮಿಲನಾ ಫಿರ್ ಆಪಕಾ ಮಿಲನಾ
ಆಪ್ ಕಿಸಕೋ ನಸೀಬ್ ಹೋತೇ ಹೇ…
ವೋ ಬಡೇ ಖುಷ್ ನಸೀಬ್ ಹೋತೇ ಹೇ….!

ಪ್ರೇಮ ಗೀತೆಗಳೆಲ್ಲ ಬಾಲ್ಕನಿಯಿಂದ ದೂರಾದ ವಿರಹ ಗೀತೆಗಳಾಗಿಯೇ ಕೇಳಿಸುತ್ತವೇಕೋ! 
ನನಗೂ ಮೌನಕ್ಕೂ ಮೊದಲಿಂದಲೂ ಎಣ್ಣೆ ಸೀಗೆಕಾಯಿ ಸಂಬಂಧವೇ. ಮಾತು ನನ್ನೆದೆಯ ಹಗುರಾಗಿಸಿದಷ್ಟೇ ಮೌನ ನನ್ನ ಕಾಡಿದೆ. ನನ್ನದು ಮಾತಾದರೆ ಜೊತೆಯಾದವನದ್ದು ಮೌನ.  ಮೌನ ಬಂಗಾರ ಕಣೆ ಅನ್ನುವುದಾದರೆ ನಂಗೆ ಬಂಗಾರ ಅಂದರೆ ಅಷ್ಟಕ್ಕಷ್ಟೇ!  ನನ್ನ ಮನದ ಮಾತುಗಳನ್ನೆಲ್ಲ ಚೂರೂ ಬೇಸರಿಸದೆ ಕೇಳಿಸಿಕೊಂಡಿದ್ದು ಮನೆಯ ಬಾಲ್ಕನಿ ಮಾತ್ರ.  ಅತ್ತಾಗೆಲ್ಲ ಮಡಿಲಲ್ಲಿ ಕೂರಿಸಿ ಸಂತೈಸಿದ್ದು,  ಒಂದೂ ಬಿಡದೆ ಖುಷಿಯನ್ನೆಲ್ಲ ಹಂಚಿಕೊಂಡಿದ್ದು,  ಪ್ರೀತಿಯ ಪಿಸುಮಾತಿಗೆ ಕಿವಿಯಾದದ್ದು… ಕಂಡೂ ಕಾಣದಂತೆ ಕಣ್ಣೀರಾಗಿದ್ದು… ಎಲ್ಲವೂ ಬಾಲ್ಕನಿಯಲ್ಲಿಯೇ. ನನಗೆ ನಾ ಅರ್ಥವಾಗಿದ್ದಕ್ಕಿಂತ ಹೆಚ್ಚು ಬಾಲ್ಕನಿಗೆ ತೆರೆದುಕೊಂಡಿದ್ದಿರಬೇಕು………..  

ಕೋಯಿ ಮೌಸಮ್ ಐಸಾ ಆಯೇ
ಉಸಕೋ ಅಪನೀ ಸಾಥ್ ಜೋ ಲಾಯೇ….

ಆಜ್ ಭಿ ದಿಲ್ ಪರ್ ಭೋಜ್ ಬಹುತ್ ಹೇ
ಆಜ್ ಭಿ ಶಾಯದ್ ನೀಂದ್ ನ ಆಯೇ…..

                                                ಬಾಲ್ಕನಿ I MISS U !   😦  😦   😦

Advertisements

10 thoughts on “ಐ ಮಿಸ್ ಯು !

 1. alemaricta ಹೇಳುತ್ತಾರೆ:

  suuuuuuuuuuuuuuuuuper!
  ಶೆಹರ್ ಕಿ ಭೀಡ್ ಮೇ ಗುಮ್ ಹೋಗಯಿ ಸಬ್ ಆವಾಜೇ
  ಅಪನೀ ಪಾಯಲ್ ಕಿ ಝಾನಕಾರ್ ಕಂಹಾ ಲಾವೂ
  ಕ್ಯಾ ವೋ ದಿನ್ ಥಿ ಕಿ ಖಾಮೋಷಿ ಭಿ ಸಜಾ ದೇತಿ ಥೀ
  ಔರ ಮೇ ದರೋ ದೀವಾರ್ ಕಂಹಾ ಲಾವೂ…
  e salu tumba chennagive..

 2. Pramod ಹೇಳುತ್ತಾರೆ:

  ವಾವ್ಹ್.. ತು೦ಬಾ ದಿನಗಳಾದ ಮೇಲೆ ಕನಸುಗಳು ಮೊಳಕೆಯೊಡೆದಿವೆ. ನಿನ್ನೆ ಮೊನ್ನೆ ತಣ್ಣಗೆಯ ಮಳೆಯೇ ಇರಬೇಕು. 🙂

 3. keshav ಹೇಳುತ್ತಾರೆ:

  तेरे बारे में जब सोचा नहीं था
  मैं तनहा था मजर इतना नहीं था
  ಎಂದು ಬಾಲ್ಕನಿಯನ್ನು ಕಂಡಾಗಲೆಲ್ಲ ಜಗಜೀತನ ಗಜಲು ಹಾಡಿಬಿಡಿ!
  – ಕೇಶವ (www.kannada-nudi.blogspot.com)

 4. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಆದಷ್ಟು ಬೇಗ ಮನೆಗೊಂದು ಬಾಲ್ಕಾನಿ ಬರಲಿ… ಅಥವಾ ಬಾಲ್ಕಾನಿ ಇರುವ ಮನೆಗೆ ನೀವು ಶಿಫ್ಟ್ ಆಗಿ 🙂

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  baalcony annu neevu miss maadkollo haage nimma blog na Odugaroo miss maadkotaa idru… matte baalkaniyalli kene coffee hididu neevu bandiddu khushi aaythu… balcony khaali bidabedi

 6. ರಂಜಿತ್ ಹೇಳುತ್ತಾರೆ:

  ಬಾಲ್ಕನಿ ಇಲ್ಲವಾದರೆ ಕಿಟಕಿ ಆದೀತು… ನೋಟ ವಿಶಾಲವಿದ್ದರೆ ಆಯ್ತಲ್ಲವೆ?
  ಆದರೆ ಭಾವಗಳು ಸರಾಗವಾಗಿ ಹರಿಯುತಲಿರಲಿ..

 7. santhosh ಹೇಳುತ್ತಾರೆ:

  “……ಎಲ್ಲವೂ ಬಾಲ್ಕನಿಯಲ್ಲಿಯೇ. ನನಗೆ ನಾ ಅರ್ಥವಾಗಿದ್ದಕ್ಕಿಂತ ಹೆಚ್ಚು ಬಾಲ್ಕನಿಗೆ ತೆರೆದುಕೊಂಡಿದ್ದಿರಬೇಕು……….. ”
  Good one….liked it…the way of narration is really good.
  ” ಶೆಹರ್ ದರ್ ಶೆಹೇರ್ ಲಿಯೇ ಫಿರ್‍ತಾ ಹೂಂ…..ತನಹಾಯಿ ಕೋ….ಕೌನ್ ಸಾ ನಾಮ್ ದು ಮೇ ತೇರಿ ಶನಾಜ಼ಾಯಿ ಕೋ….”
  try to listen this Gazal of Mr.Hariharan

  Once again thanks for the good post.

  Keep it up…

 8. ವಿಜಯರಾಜ್ ಕನ್ನಂತ ಹೇಳುತ್ತಾರೆ:

  thumba dinadinda balcony khali ide 🙂

 9. shivu.k ಹೇಳುತ್ತಾರೆ:

  ಬಾಲ್ಕನಿಯಿಂದ ಇಷ್ಟೆಲ್ಲಾ ಆಗುತ್ತಾ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s