ಕಳೆದ ರಾತ್ರಿಯ ಕನವರಿಕೆಗಳು!

ಮುಸ್ಸಂಜೆಯ ಹೆಬ್ಬಾಗಿಲಲ್ಲಿ
ಕತ್ತಲ ಚೀಲವೊಂದನ್ನಿಟ್ಟು ನಡೆದ ಸೂರ್ಯ
ತೆರೆದು ನೋಡಿದರೆ ಎಣಿಸಲಾರದಷ್ಟು ಕನಸುಗಳಿದ್ದವು
ಜೊತೆ ನಿನ್ನ ನೆನಪ ಸೇರಿಸಿ ಪೋಣಿಸಿದೆ
ಕೊರಳಲ್ಲೀಗ ನಗುವ ಹಾರವಿದೆ!

++++++++++++++++++++++++++++

ಮುಂಜಾವಿನ ಬೆಳಕ ಪರದೆಯ ಹಿಂದೆ
ಕನಸುಗಳ ಮೆರವಣಿಗೆ
ರಾತ್ರಿಯರಮನೆಯ ಹೆಬ್ಬಾಗಿಲಲ್ಲಿ ನಿಂತ ಸೂರ್ಯ
ಮೆಲ್ಲಗೆ ಕನಸು ಕದಿಯುತ್ತಾನೆ!

+++++++++++++++++++++++++++

ಮುಗಿಯದ ದಾರಿ, ತಿರುವಲ್ಲಿ ಕತ್ತಲು
ದಿಕ್ಕಿಲ್ಲ ದೆಸೆಯಿಲ್ಲ
ದೂರದಲ್ಲೊಂದು ಬೆಳಕು, ಜೊತೆಗಷ್ಟು ಕನಸು
ಸುಮ್ಮನೆ ಬಳಿ ಬಂದು ದಿಟ್ಟಿಸಿದೆ
ಅದು ನೀನು!

+++++++++++++++++++++++++

ಅವನು ಮೋಡವಾದ
ನಾನು ಮಿಂಚಾದೆ
ಎದುರು ಬದರಾಗಿದ್ದು ಒಂದೇ ಕ್ಷಣ
ಆತ ಹನಿ ಸುರಿಸಿ ಕರಗಿ ಹೋದ
ನಾನು ಬೆಳಕು ನೀಡಿ ಒಂಟಿಯಾದೆ…..

++++++++++++++++++++++++

 ನನ್ನ ಕನಸುಗಳ ಹಾದಿಗೆ ಕಾಲಿಡುವ
ಮುನ್ನ ನಕ್ಕುಬಿಟ್ಟೆಯೇಕೆ?
ಬೆಳದಿಂಗಳಿಗೆ ಜಾಗವಿಲ್ಲವೆಂದು
ಚಂದ್ರ ಮುನಿದಿದ್ದಾನೆ!

++++++++++++++++++++++++

ನನಗಿನ್ನು ಕನಸುಗಳು ಕಾಡುವುದಿಲ್ಲ
ಅವುಗಳಿಗೆ ನಿನ್ನ ರಾತ್ರಿಗಳ
ವಿಳಾಸ ನೀಡಿದ್ದೇನೆ!

Advertisements

16 thoughts on “ಕಳೆದ ರಾತ್ರಿಯ ಕನವರಿಕೆಗಳು!

 1. Pramod ಹೇಳುತ್ತಾರೆ:

  ವ್ಹಾವ್.. ಸೂಪರೋ ಸೂಪರ್ ಕನವರಿಕೆಗಳು.. 🙂

 2. ಸುಶ್ರುತ ಹೇಳುತ್ತಾರೆ:

  ಚಂದ ಚುಟುಕುಗಳು. ಇಷ್ಟವಾದ್ವು.

 3. shivu.k ಹೇಳುತ್ತಾರೆ:

  ವೈಶಾಲಿ ಮೇಡಮ್,

  ಚುಟುಕುಗಳು ತುಂಬಾ ಚೆನ್ನಾಗಿವೆ…

  ಕೊನೆಯದು…
  ನನಗಿನ್ನು ಕನಸುಗಳು ಕಾಡುವುದಿಲ್ಲ
  ಅವುಗಳಿಗೆ ನಿನ್ನ ರಾತ್ರಿಗಳ
  ವಿಳಾಸ ನೀಡಿದ್ದೇನೆ!

  ತುಂಬಾ ಇಷ್ಟವಾಯಿತು…

 4. Poornima Bhat ಹೇಳುತ್ತಾರೆ:

  ನನಗಿನ್ನು ಕನಸುಗಳು ಕಾಡುವುದಿಲ್ಲ
  ಅವುಗಳಿಗೆ ನಿನ್ನ ರಾತ್ರಿಗಳ
  ವಿಳಾಸ ನೀಡಿದ್ದೇನೆ! – Wahh… Kya baat hai! 🙂

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  Modala hani mattu kone hani thumbaa ishtavaaaytu…

 6. ರಂಜಿತ್ ಹೇಳುತ್ತಾರೆ:

  ಬಾಲ್ಕನಿಯವರು ಮಾತ್ರವೇ ಬರೆಯಬಹುದಾದಂತ ಸುಂದರ ಹನಿಗಳು.

  ತುಂಬಾ ಚೆನ್ನಾಗಿದೆ..

  ಥ್ಯಾಂಕ್ಸ್.

 7. Manaswi ಹೇಳುತ್ತಾರೆ:

  ಹನಿಗವನ ಬರ್ತಿ ಚನಾಗಿ ಬರದ್ದೆ .. ಇನ್ನೊಂದಿಷ್ಟು ಹನಿಗವನಗಳನ್ನ ಬೇಗ ಬರಿ ಕಾಯ್ತಾ ಇದ್ದಿ ಓದಕ್ಕೆ 🙂

 8. minchulli ಹೇಳುತ್ತಾರೆ:

  ಎದುರು ಬದರಾಗಿದ್ದು ಒಂದೇ ಕ್ಷಣ
  ಆತ ಹನಿ ಸುರಿಸಿ ಕರಗಿ ಹೋದ
  ನಾನು ಬೆಳಕು ನೀಡಿ ಒಂಟಿಯಾದೆ…..

  and

  ನನಗಿನ್ನು ಕನಸುಗಳು ಕಾಡುವುದಿಲ್ಲ
  ಅವುಗಳಿಗೆ ನಿನ್ನ ರಾತ್ರಿಗಳ
  ವಿಳಾಸ ನೀಡಿದ್ದೇನೆ!

  ಎರಡೂ wonderful… ಹೀಗೆ ಚೆಂದಗೆ ಬರೆಯುತ್ತಿರಿ..

 9. dharithri ಹೇಳುತ್ತಾರೆ:

  ವೈಶಾಲಿ ಮೇಡಂ.ಇವತ್ತು ನಾನು ಬೆಳಿಗ್ಗೆ ಕಾಫಿ ಕುಡಿದಿರಲಿಲ್ಲ…ಅದ್ಕೆ ಇಲ್ಲಿ ಬಂದೆ..ಕಾಫಿ ಡೇಗಿಂತಲೂ ವೈಶಾಲಿ ಮನೆಯಲ್ಲಿ ಕಾಫಿ ಕುಡಿಯೋದೇ ಒಳ್ಳೆದೆನಿಸಿತ್ತು. ಒಂದೇ ಗುಟುಕಿಗೆ ಎಲ್ಲಾನೂ ಹೀರಿಬಿಟ್ಟೆ! ರಿಯಲೀ..ನಿಮ್ಮ ಪುಟ್ಟ ಪುಟ್ಟ ಹನಿಗಳು ಮನಸ್ಪರ್ಶಿ. ಅಭಿನಂದನೆಗಳು
  -ಧರಿತ್ರಿ

 10. ಆಲಾಪಿನಿ ಹೇಳುತ್ತಾರೆ:

  ಚೆನ್ನಾಗಿದೆ ಕಾವ್ಯ…

 11. Raghavendra M ಹೇಳುತ್ತಾರೆ:

  ಸುಂದರವಾಗಿವೆ ಈ ಹನಿಗಳು…

 12. Gururaj Kulkarni ಹೇಳುತ್ತಾರೆ:

  Nice ones. I got this page through Kannadaprabha.

  Guess, come back to this page to look for more.

  Good luck
  -Gururaj

 13. dr.prashanth ಹೇಳುತ್ತಾರೆ:

  tumba channagide….super

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s