ಕಾಯುವುದೆಂದರೆ ಕರಗುತ್ತಿರುವಂತೆ
ನನಗನ್ನಿಸಲಿಲ್ಲ ಹಾಗೆ
ಕರಗುವುದಾದರೆ ಮೊದಲು ಮೆದುವಾಗಬೇಕು
ನಂತರ ಹನಿ
ಹನಿಯಾಗಿ ಕೆಳಗಿಳಿಯಬೇಕು
ಮೆಲ್ಲನೆ ಹರಿದು ಹಗುರಾಗಬೇಕು
ಅದೆಲ್ಲ ಆಗು ಹೋಗುವ ಮಾತೆ?
ಕಾಯುವಾಗೆಲ್ಲ ಕಿಡಿಯಾಗುತ್ತೇನೆ ನಾನು
ಅದು ಜಡ್ಡುಗಟ್ಟುವ ಕ್ರಿಯೆ
ಕುಳಿತಲ್ಲೇ ನಿದ್ದೆ ಹೋಗಿದ್ದೇನೆ ಕೂಡ
ಕಾದಂತೆಲ್ಲ ಕಳಿಯುತ್ತದೆ ಮನ
ನನಗನ್ನಿಸಲಿಲ್ಲ ಹಾಗೆ
ಮನದೊಂದಿಗೆ ತಲೆಯನ್ನೂ ಕಾಯಿಸಿಕೊಂಡಿದ್ದಿದೆ
ಕಣ್ಣ ರೆಪ್ಪೆಗಳಿಗೀಗ ಭಾರಕ್ಕೆ ಶಕ್ತವಲ್ಲ
ಕಾಯುವಿಕೆಯೆಂದರೆ ಕಡಲಾಗುವಿಕೆ
ಎಷ್ಟು ಈಜಿದರೂ ಬಾರದ ತೀರ
ಬಗೆಹರಿಯದ ನೀರವತೆ
ಒಳಹೊರಗೆಲ್ಲ ಮೌನ,
ಮಾತು ಕೊಂದ ನಂತರದ ಖುಷಿ
ಕಾಯುವುದೆಂದರೆ ಕೆನೆಗಟ್ಟಿದಂತೆ
ಪದರು ಪದರಾದ ಸಿಟ್ಟು ಅಸಹನೆ
ಕೈ ತಪ್ಪಿದ ತಾಳ್ಮೆ
ಕಾಯುವುದೆಂದರೆ ಕೆಟ್ಟು ಹೋದ ಗಡಿಯಾರ…..
ಚೆನ್ನಾಗಿದೆ!
ಸಾಲುಗಳು ಇಷ್ಟವಾದವು.
ವಾಹ್….!
ನಾವೂ ನಿಮ್ಮ ಕವಿತೆಗೆ ಕಾದದ್ದು ಸಾರ್ಥಕವಾಯಿತು..
ಕಾಯುವದರಲ್ಲಿ ಸಿಹಿಯುಂಟು..
ಬರುವಿಕೆಯ ಭರವಸೆ ಇದ್ದರೆ…
” ಎಷ್ಟು ಈಜಿದರೂ ಬಾರದ ತೀರ
ಬಗೆಹರಿಯದ ನೀರವತೆ
ಒಳಹೊರಗೆಲ್ಲ ಮೌನ,
ಮಾತು ಕೊಂದ ನಂತರದ ಖುಷಿ..”
ತುಂಬಾ ಚಂದದ ಸಾಲುಗಳು..
ಇಷ್ಟವಾಯಿತು…
ಚಂದದ ಸಾಲುಗಳು… Singapore na chou chu kang ನಲ್ಲಿ
ಕುಳಿತು ಬರೆದಂತಿದೆ! 🙂
ಕಾಯುವುದೆಂದರೆ ಕೆನೆಗಟ್ಟಿದಂತೆ
ಪದರು ಪದರಾದ ಸಿಟ್ಟು ಅಸಹನೆ
ಕೈ ತಪ್ಪಿದ ತಾಳ್ಮೆ
ಕಾಯುವುದೆಂದರೆ ಕೆಟ್ಟು ಹೋದ ಗಡಿಯಾರ…..
ಅಲ್ಟಿಮೇಟ್ ’ಕಾವ್ಯ’!!!
“ಕಾಯುವಿಕೆಯೆಂದರೆ ಕಡಲಾಗುವಿಕೆ
ಎಷ್ಟು ಈಜಿದರೂ ಬಾರದ ತೀರ
ಬಗೆಹರಿಯದ ನೀರವತೆ
ಒಳಹೊರಗೆಲ್ಲ ಮೌನ,
ಮಾತು ಕೊಂದ ನಂತರದ ಖುಷಿ”
ಆಹಾ….ಈ ಕಾಯುವಿಕೆಯ ನೋವಿನಲ್ಲೂ ಒಂದು ಸಣ್ಣ ಸಂತಸವಿದ್ದಿದ್ದರೆ…! ಇಷ್ಟವಾಯಿತು….
ಪ್ರಕಾಶಣ್ಣ, ಆದಿತ್ಯ, ಆಲಾಪಿನಿ, ಸಂತೋಷ್.. thanQ thanQ thanQ 🙂
ಮಧುಸೂದನ್,
thanQ and welcome ಬಾಲ್ಕನಿ ಗೆ 🙂
🙂