ಒಂದು ಕಡೆ ಬ್ಲಾಗಿನ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಇನ್ನೆಲ್ಲೋ ಕೆಸರೆರೆಚಾಟ ಮುಂದುವರೆದೇ ಇದೆ. ಮತ್ತೆಲ್ಲೋ ಬ್ಲಾಗಿಗರು ಬಾಗಿಲು ಮುಚ್ಚುತ್ತಿದ್ದಾರೆ. ನಾನು ನನ್ನ ಪಾಡಿಗೆ ಬಾಲ್ಕನಿಯಲ್ಲಿ ಕುಳಿತು ಕೆನೆ ಕಾಫಿ ಹೀರೋಣ ಅಂದ್ರೆ ನೀನ್ಯಾಕೆ ದೂರ ಅಂತ ನಂಗೂ ಒಂದು ತಲೆಬಿಸಿ ಸುತ್ತಿಕೊಂಡಿದೆ. ನಾನು ನಾನೇನಾ? ಅಥವಾ ನಾನು ಅವಳಾ? ಇಲ್ಲಾ, ಅವಳೇ ನಾನಾ? ಫುಲ್ ತಲೆಬಿಸಿ. ನಂಗೂ ಹೇಳಿ ಹೇಳಿ ಸಾಕಾಯ್ತು.
ಈಗ ವಿಷ್ಯ ಏನಪ್ಪಾ ಅಂದ್ರೆ, ಕೆಂಡಸಂಪಿಗೆ ವೆಬ್ ಸೈಟ್ ಗೆ ಹೋದರೆ ನಿಮಗೆ ವೈಶಾಲಿ ಹೆಗಡೆ ಅನ್ನುವವರ ಬರಹಗಳು ಸಿಗುತ್ತೆ. ಕೆಂಡಸಂಪಿಗೆಯ ಬರಹಗಾರರ ಬಳಗದಲ್ಲಿ ಅವರೂ ಒಬ್ಬರು. ಚಂದದ ಕವಿತೆಗಳನ್ನೂ ಬರೀತಾರೆ.
ಈಗ ಕನ್ಫ್ಯೂಷನ್ನು ಏನಂದ್ರೆ ನಾನವಳಲ್ಲ! ತುಂಬಾ ಜನ ನಂಗೆ ಕೇಳಿದ್ರು. ಕೆಂಡಸಂಪಿಗೆಗೆ ಬರೆಯೋ ವೈಶಾಲಿ ಹೆಗಡೆ ನೀವೇನಾ ಅಂತ. ನಮ್ಮಿಬ್ಬರ ಹೆಸರು, ನಾವಿಬ್ಬರೂ ಹೊರದೇಶದಲ್ಲಿರುವವರೂ ಆಗಿದ್ದರಿಂದ ಈ ಗೊಂದಲ ಆಗಿರಬಹುದು. ಬಹುಶಃ ನನ್ನ ಈ ಅನುಭವ ಅವರಿಗೂ ಆಗಿರಲಿಕ್ಕೆ ಸಾಕು. ಹಾಗಾಗಿ ದಯವಿಟ್ಟು ಕನ್ಫ್ಯೂಸು ಆಗ್ಬೇಡಿ 🙂 ನಾನವಳಲ್ಲ…. ಏನೋ..ಚಿಕ್ಕದೊಂದು ಬ್ಲಾಗು ಅಂತ ಮಾಡ್ಕೊಂಡು ಬಾಲ್ಕನಿಲಿ ಕಾಫಿ ಕುಡ್ಕೊಂಡು, ಹಾಡು ಕೇಳ್ಕೊಂಡು ಹಾಯಾಗಿದ್ದೆ. ಇದೇನೋ ಹೊಸ ಗೊಂದಲ ಮೈಮೇಲೆ ಬಿತ್ತು. ಈಗ ಸ್ವಲ್ಪ ಓಕೆ… ಇದನ್ನ ಹೇಳಿದ್ಮೇಲೆ ತಲೆಬಿಸಿ ಕಡಿಮೆಯಾಗುತ್ತೆ ಅಂದ್ಕೊಂಡಿದೀನಿ.
ಕಾಫಿ ಆರೋಯ್ತು 😦 😦
– ವೈಶಾಲಿ
🙂 🙂 🙂
🙂
ವೈಶಾಲಿ…
ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿಯೊಂದಿರುತ್ತದೆ…
ಅದರಿಂದ ಅವರ ರಚನೆ ಗುರುತಿಸ ಬಹುದು..
ಇದು ನನ್ನ ಅನುಭವ…
ನನಗಂತೂ ಕನ್ಫ್ಯೂಸ್ ಆಗುವ ಸಾಧ್ಯತೆಯೇ ಇಲ್ಲ…
ನನಗೆ ಕೆಂಡ ಸಂಪಿಗೆಗೆ ಹೋಗುವದು ಬಹಳ ಕಡಿಮೆ…
ಸ್ನೇಹಿತರು ತಮ್ಮ ಲೇಖನ, ಕವನ ಬಂದಿದೆ ಅಂತ ಲಿಂಕ್ ಕೊಟ್ಟಾಗ ಹೋಗುವೆ..
ಆದರೂ ನೀವು ಹೇಳಿದ್ದು ಒಳ್ಳೆಯದಾಯಿತು…
ನಂಗಂತೂ ಕನ್ ಫ್ಯೂಶನ್ ಇಲ್ಲೇ ಬಿಡು, ನಂಗೆ ಇನ್ನೊಬ್ಬ ವೈಶಾಲಿ ಗೊತ್ತೇ ಇಲ್ಲೇ 🙂 ಮೇಲಿನ ಕಾಫಿ ಚಿತ್ರದಲ್ಲಿ ಕೆನೆ ಕಡಮೆ ಇದ್ದು ಹಂಗೆ ನೋಡಿರೆ ತುಂಬಾ ಸ್ಟ್ರಾಂಗ್ ಅನ್ಸ್ತಾ ಇದ್ದು 🙂
ಹೌದೋ.. ಕೆನೆ ಕಾಫಿ ಕುಡಿದು bore ಆಗ್ತಾ ಇತ್ತು. so…. ಸ್ವಲ್ಪ ಸ್ಟ್ರಾಂಗ್ ಕಾಫಿ ಕುಡಿದು ಫ್ರೆಶ್ ಆಗನ ಅಂತ 😀
ಕ್ಲಾರಿಫಿಕೇಶನ್ ಪಬ್ಲಿಕ್ ಆಗಿ ಕೊಟ್ಟಿದ್ದು ಒಳ್ಳೇದಾಯ್ತು.
ಒಂದು ಹೆಸರಿನವರು ಇಬ್ಬರಿದ್ದಾಗ ಇಂಥ ಗೊಂದಲ ಸಹಜ. ಆದರೂ ನಿಮ್ಮ ಬರಹ, ಪಾಡು ನಗು ತರಿಸಿತು…
ಕಾಫಿ ಆರೋದೇನೂ ಬೇಡ.. ಎಷ್ಟೇ ವಿಧವಿಧದ ಕಾಫಿ ಬಂದರೂ ಕೆನೆಕಾಫಿ, ಕೆನೆಕಾಫೀನೇ ಅಲ್ವೇ..?
ಬರೀತಿರಿ..
🙂
ಅಯ್ಯೋ ಶಿವನೆ! ನಾನೂ ಅದು ನೀನೇ ಸಯ್ಯಿ ಅಂದ್ಕಂಡಿದ್ನಲೇ!
😦
nangu hinde omme anumana bandu avara profile tegedu photo nOdalAgi nivalla anta gottagittu. 🙂
;D ;D 😀