ದಾರಿ ಕೂಡುವಲ್ಲಿ..

ಇದು ನನ್ನದಲ್ಲದ ಕವಿತೆ. ಬಾಲ್ಕನಿ ಗೆ ಬಂದು ಕುಳಿತಿತ್ತು. ನಂಗೆ ಖುಷಿಯಾಗಿದ್ದರಿಂದ ನಿಮ್ಮೊಂದಿಗೂ ಹಂಚಿಕೊಳ್ಳೋಣ ಅಂತ. ಯಾರದ್ದು ಅಂತ ಕೇಳಬೇಡಿ. ನಿಮಗೆ ಗೊತ್ತಿದ್ದಷ್ಟೇ ನನಗೂ.
….. just enjoy!

ದಾರಿ ಕೂಡುವಲ್ಲಿ..

ಬೆಳಕು ಮೂಡುವ ಘಳಿಗೆ
ಕಣ್ಣ ಬಿಚ್ಚಿದರೆ
ರೆಪ್ಪೆಗಳಗಿಂದ ಹಾರಿದ ಕನಸು
ಬೆಳಕಿನ ಬಣ್ಣಗಳಲ್ಲಿ ಲೀನ

ಇಲ್ಲ, ಬೆಳಗಿಗೆ ಬಣ್ಣ ತುಂಬಿ
ಬಿಸಿಲ ತೋರಿದ್ದೂ ಅದೇ ಇರಬಹುದು

ದಿನದುದ್ದಕೂ ಕನಸ ಹುಡುಕುತ್ತ
ಹೊರಟ ಹಾದಿಯಲ್ಲಿ
ಸಿಕ್ಕ ವಾಸ್ತವವನ್ನೆಲ್ಲ ಹೆಕ್ಕುತ್ತ
ದೂರ ನೋಡಿದರೆ
ಬಿಸಿಲಿಗಾಗಲೇ ಸುಸ್ತು ಹೊಡೆದು
ಮತ್ತದೇ ಬಣ್ಣಗಳ ಆಟ

ಸೂರ್ಯ ಮುಳುಗುವ ಹೊತ್ತು
ತಂಪಾಗಿ ನಡೆದುಬಿಡುತ್ತೇನೆ
ಹೆಜ್ಜೆಗಳ ಬಿರುಸೆಲ್ಲ ನಿಧಾನ
ನಿಧಾನವಾಗಿ ಇಳಿವಲ್ಲಿ
ಕುಳಿತು ಸಾಯಂಕಾಲ ಸವಿಯುತ್ತೇನೆ

ಗಾಳಿ ತನ್ನಿರುವ ಸ್ಪಷ್ಟಪಡಿಸುವಾಗ
ಕುಳಿತಲ್ಲೆ ಕದಲಿ ಖುಷಿಯಾಗಿ
ಸುಳಿಯಾಗುವ ಮುಂಗುರುಳ ತೀಡಿ
ಹಗುರಾಗಿ ಹೊರಡುತ್ತೇನೆ
ಬೆಳಕು ದಾರಿ ಕೂಡುವಲ್ಲಿ

4 thoughts on “ದಾರಿ ಕೂಡುವಲ್ಲಿ..

 1. shivu.k ಹೇಳುತ್ತಾರೆ:

  ವೈಶಾಲಿ ಮೇಡಮ್,

  ಬಣ್ಣಗಳ ಬಗೆಗಿನ ಕಲ್ಪನೆ ಚೆನ್ನಾಗಿದೆ…ಅಂತ ಚೆನ್ನಾಗಿದೆ…

 2. Ismail Mk Shivamogga ಹೇಳುತ್ತಾರೆ:

  vaishaaliyavare
  bahaLa chennaagide nimma barahagaLu

 3. ರಂಜಿತ್ ಹೇಳುತ್ತಾರೆ:

  >>ಬೆಳಕು ಮೂಡುವ ಘಳಿಗೆ
  ಕಣ್ಣ ಬಿಚ್ಚಿದರೆ
  ರೆಪ್ಪೆಗಳಗಿಂದ ಹಾರಿದ ಕನಸು
  ಬೆಳಕಿನ ಬಣ್ಣಗಳಲ್ಲಿ ಲೀನ

  ಇಲ್ಲ, ಬೆಳಗಿಗೆ ಬಣ್ಣ ತುಂಬಿ
  ಬಿಸಿಲ ತೋರಿದ್ದೂ ಅದೇ ಇರಬಹುದು<<

  ಅದ್ಭುತ ಕಲ್ಪನೆ ಮೇಡಮ್.. ಒಟ್ಟಾರೆ ಕವನವೂ ಸುಂದರ!

  ಮೊದಲು "ನಾನವಳಲ್ಲ" ಅಂದಿರಿ, ಈಗ "ಇದು ನಂದಲ್ಲ!" ಅಂತಿದೀರಿ!:)

  ಈ ಕವಿತೆ ಯಾರದ್ದೇ ಆದರೂ ಅವರಿಗೆ ನನ್ನದೊಂದು ಕಂಗ್ರಾಟ್ಸ್ (ಕವಿತೆ ಒಲಿದಿದ್ದಕ್ಕೆ) ಮತ್ತೊಂದು ಥ್ಯಾಂಕ್ಸ್ (ನಮಗೆ ನೀಡಿದ್ದಕ್ಕೆ) ಹೇಳಿಬಿಡಿ.

 4. Sudesh ಹೇಳುತ್ತಾರೆ:

  Vaishaaliyavare….

  Kene Coffeya ruchi thumba chennagide…. nanagu omme heege yellindalo ondu kavana sikkiththu… eshtu chennaagiththendare yellara baliyu adannu hanchi kondidde…

  E kavanavu ashte chennagide…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s