ಮೌನದಲ್ಲನಿಸಿದ್ದು…

Eyes
ದೀರ್ಘವಾಗುತ್ತವೆ ಹಗಲುಗಳು
ನಿರ್ಜೀವ ಕನಸುಗಳ ಚಪ್ಪರದಡಿ

ತಣ್ಣಗಿನ ಮೌನ, ಬೇಸರದ ಸಂಜೆಗಳು
ಯಾರೆಂದರು ನಿಮಗೆ
ಕೊಲ್ಲಲು ಆಯುಧಗಳೇ ಬೇಕೆಂದು ?

ಇಟ್ಟಲ್ಲಿಯೇ ಇರುವ ಪುಸ್ತಕ
ಮೇಜಿನ ಮೇಲೆ ಎರಡಿಂಚು ಧೂಳು
ಮಸುಕಾದ ಬಿಂಬದ ಬಗೆಗೀಗ
ಕನ್ನಡಿಯೂ ನಿರ್ಲಿಪ್ತ

ಕಿಟಕಿಯಾಚೆಗೆ ಇಣುಕುವ ಮೋಡಕ್ಕೆ
ಗುದ್ದಾಡಿಯಾದರೂ ಸದ್ದು
ಮಾಡುವ ಹಂಬಲ
ಗುಡಿಸುವಾಗ ಕೈಗೆ ಸಿಕ್ಕ ಚೂರು
ಹಗಲುಗನಸಿನದ್ದೆ?

ಮಾತನಾಡ ಬಯಸುತ್ತವೇನೋ
ಸುತ್ತಲಿನ ಗೋಡೆಗಳು
ನನ್ನೆದೆಯ ನಿಟ್ಟುಸಿರ ಸದ್ದು
ಹಳೆಯ ಸಂಗತಿ ಈಗ

ಮಡಚಿ ಎತ್ತಿಟ್ಟ ಪತ್ರದ
ಹಾಳೆಗಳೆಲ್ಲ ಹಳದಿಯಾಗಿವೆ
ಕಾಗದಗಳನ್ನೆಲ್ಲ ದಾಟಿ ಬಂದ ಗೆದ್ದಿಲು
ಹುಡುಕುತ್ತಿರುವುದು ನನ್ನೊಳಗನ್ನಲ್ಲ ತಾನೇ?

ಹೀಗಿಲ್ಲದೆಯೂ ಇರಬಹುದು
ಆಗಾಗ ಸರಿಸುತ್ತಿರಬೇಕು ಮನದ ಪರದೆ
ಬಿರುಬಿಸಿಲಲ್ಲೂ ಒಮ್ಮೊಮ್ಮೆ ಕಣ್ಣು ಕತ್ತಲಾಗುವುದಿದೆ……!

6 thoughts on “ಮೌನದಲ್ಲನಿಸಿದ್ದು…

 1. Rajesh Manjunath ಹೇಳುತ್ತಾರೆ:

  ಮುಸ್ಸಂಜೆ ಹೊತ್ತಲ್ಲಿ ಒಂದು ಕಪ್ ಕಾಫಿ ಹೀರುತ್ತಾ ಗಾಳಿಗೆ ಮೈ ಒಡ್ಡಿ ಕುಳಿತಂದಿದೆ ಕವನದ ಭಾವ. ಹದವಾದ ಮತ್ತಷ್ಟೇ ಮುದವಾದ ಕವನ.

 2. mruthyu ಹೇಳುತ್ತಾರೆ:

  ಬೆರಗು ಹುಟ್ಟಿಸಿದ ರೂಪಕಗಳ ಸಾಲುಗಳು!

 3. venuvinod ಹೇಳುತ್ತಾರೆ:

  ತಣ್ಣಗಿನ ಮೌನ, ಬೇಸರದ ಸಂಜೆಗಳು
  ಯಾರೆಂದರು ನಿಮಗೆ
  ಕೊಲ್ಲಲು ಆಯುಧಗಳೇ ಬೇಕೆಂದು ?

  ..ಮತ್ತೆ ಮತ್ತೆ ಕಾಡುವ ಸಾಲುಗಳು ವೈಶಾಲಿಯವರೇ….

 4. ದಿವ್ಯಾ ಹೇಳುತ್ತಾರೆ:

  ಚೆನ್ನಾಗಿದೆ.. ತುಂಬಾನೇ ಇಷ್ಟವಾಯಿತು

 5. Vikram ಹೇಳುತ್ತಾರೆ:

  ಮೌನದಲ್ಲಿನ ಮಧುರಭಾವಕ್ಕೆ ಮೂಕನಾಗಿದ್ದಂತೂ ನಿಜ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s